ಕರ್ನಾಟಕ

karnataka

ETV Bharat / city

ಎಸಿಪಿ ಸೇರಿ ಇಬ್ಬರು ಇನ್ಸ್​ಪೆಕ್ಟರ್ ವಿರುದ್ಧ ಪ್ರತ್ಯೇಕ ಮೂರು ಎಫ್ಐಆರ್ ದಾಖಲು

ಅಕ್ರಮವಾಗಿ ಸಿಗರೇಟ್ ಮಾರಾಟಕ್ಕೆ ಅವಕಾಶ ಮತ್ತು ಮಾಸ್ಕ್ ಮಾರಾಟಗಾರರಿಂದ ಲಂಚ ಪಡೆದ ಆರೋಪ ಕೇಳಿ ಬಂದ ಹಿನ್ನೆಲೆ ಎಸಿಪಿ ಸೇರಿ ಇಬ್ಬರು ಇನ್ಸ್​ಪೆಕ್ಟರ್ ವಿರುದ್ಧ 3 ಪ್ರತ್ಯೇಕ ಎಫ್ಐಆರ್ ದಾಖಲಾಗಿವೆ.

FIR
FIR

By

Published : May 21, 2020, 7:48 PM IST

ಬೆಂಗಳೂರು: ಲಾಕ್​ಡೌನ್ ಅವಧಿಯಲ್ಲಿ ಅಕ್ರಮವಾಗಿ ಸಿಗರೇಟ್ ಮಾರಾಟಕ್ಕೆ ಅವಕಾಶ ಮತ್ತು ಮಾಸ್ಕ್ ಮಾರಾಟಗಾರರಿಂದ ಸುಮಾರು 2 ಕೋಟಿ ಲಂಚ ಪಡೆದ ಆರೋಪ ಪ್ರಕರಣ ಸಂಬಂಧ ಎಸಿಪಿ ಹಾಗೂ ಇನ್ಸ್​ಪೆಕ್ಟರ್​ಗಳ ವಿರುದ್ಧ ರಾಜ್ಯ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಯಲ್ಲಿ ಮೂರು ಎಫ್ಐಆರ್ ದಾಖಲಾಗಿವೆ.

ಪತ್ರಿಕಾ ಪ್ರಕಟಣೆ

ಅಮಾನತುಗೊಂಡಿರುವ ಸಿಸಿಬಿ ಎಸಿಪಿ ಪ್ರಭುಶಂಕರ್, ಇನ್ಸ್​ಪೆಕ್ಟರ್​ಗಳಾದ ನಿರಂಜನ್ ಹಾಗೂ ಅಜಯ್ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಮೂರು ಪ್ರತ್ಯೇಕ ಎಫ್ಐಆರ್ ದಾಖಲಿಸಿಕೊಂಡು ತನಿಖೆ‌ ಕೈಗೊಳ್ಳಲಾಗಿದೆ ಎಂದು‌ ಎಸಿಬಿ‌‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ‌.

ಏ.30 ರಂದು ಆನಂದಪುರದ ರಮೇಶ್ ಎಂಬಾತ ಕಂಪನಿಯೊಂದರ ಸಿಗರೇಟ್‌ ಅನ್ನು ಅನಧಿಕೃತವಾಗಿ ದಾಸ್ತಾನುದಾರ ಟಿಸಿಎಸ್ ಮತ್ತು ದೊಡ್ಡನೆಕ್ಕುಂದಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಖರೀದಿಸಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ. ಈ ವೇಳೆ ದಾಳಿ ನಡೆಸಿ 12 ಲಕ್ಷ ಬೆಲೆಬಾಳುವ 12 ಬಾಕ್ಸ್​ಗಳಲ್ಲಿದ್ದ ಸಿಗರೇಟ್‌ಗಳನ್ನು ವಶಪಡಿಸಿಕೊಂಡಿದ್ದರು. ನಿಷೇಧದ ನಡುವೆಯೂ ಸಿಗರೇಟ್ ಮಾರಾಟ ಮಾಡಿದ್ದರಿಂದ ಅವರ ವಿರುದ್ಧ ದೂರು ದಾಖಲಾಗಿತ್ತು.

ಸಿಸಿಬಿ ಎಸಿಪಿ ಪ್ರಭು ಶಂಕರ್ ಈ ಕುರಿತು ಪ್ರಕರಣ ದಾಖಲಿಸಬಾರದೆಂದು ಕಂಪನಿ ಮಾಲೀಕರು ಲಂಚ ಕೊಡಲು ಮುಂದಾಗಿದ್ದರು ಎನ್ನಲಾಗಿತ್ತು. ಅಷ್ಟೇ ಅಲ್ಲದೆ ಎಸ್‌ಪಿ ಪ್ರಭು ಶಂಕರ್ ಅವರು 65 ಲಕ್ಷಕ್ಕೆ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ‌ಅಲ್ಲದೆ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ನಕಲಿ ಮಾಸ್ಕ್​ಗಳ ಮಾರಾಟದ ಅಡ್ಡೆ‌ ಮೇಲೆ ದಾಳಿ‌ ನಡೆಸಿ, ಆರೋಪಿಗಳಿಂದ ಲಂಚ ಪಡೆದಿದ್ದರು ಎನ್ನುವ ಆರೋಪ ಸೇರಿದಂತೆ ಎಸಿಪಿ ಹಾಗೂ ಇಬ್ಬರು ಇನ್ಸ್​ಪೆಕ್ಟರ್​ಗಳ ವಿರುದ್ಧ ಎಫ್​ಐಆರ್​ ದಾಖಲಾಗಿವೆ.

ABOUT THE AUTHOR

...view details