ಕರ್ನಾಟಕ

karnataka

ETV Bharat / city

ಖಾಲಿ ರೋಡಲ್ಲಿ ವ್ಹೀಲಿಂಗ್​ ತಂದ ಆಪತ್ತು: ಬೈಕ್​ಗಳ ನಡುವೆ ಡಿಕ್ಕಿಯಾಗಿ ಬೆಂಗಳೂರಲ್ಲಿ ಮೂವರು ದುರ್ಮರಣ - ಬೆಂಗಳೂರು ಕ್ರೈಮ್​ ಲೇಟೆಸ್ಟ್​ ನ್ಯೂಸ್​

ವ್ಹೀಲಿಂಗ್ ಮಾಡಲು ಹೋಗಿ ಮೂವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಘಟನಾ ಸ್ಥಳಕ್ಕೆ ಯಲಹಂಕ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

3 died while bike wheeling in Bangalore
ವ್ಹೀಲಿಂಗ್​ ಶೋಕಿ

By

Published : Jun 21, 2020, 12:36 PM IST

Updated : Jun 21, 2020, 2:56 PM IST

ಬೆಂಗಳೂರು: ನಗರದಲ್ಲಿ ಮತ್ತೆ ಯುವಕರು ವ್ಹೀಲಿಂಗ್ ಶೋಕಿ ಮಾಡಲು ಮುಂದಾಗಿ ಪ್ರಾಣವನ್ನೇ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಏರ್​ಪೋರ್ಟ್ ಜಿಕೆವಿಕೆ ರಸ್ತೆಯ ಬಳಿ ವ್ಹೀಲಿಂಗ್ ಮಾಡುತ್ತಾ ಬಂದಾಗ ಬೈಕ್​ಗಳ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿದೆ. ಈ ವೇಳೆ ಸೈಯ್ಯದ್ ರಿಯಾಜ್ ಹಾಗೂ ಆದಿಲ್ ಎಂಬುವರು ರಸ್ತೆಯಲ್ಲೇ ಸಾವನ್ನಪ್ಪಿದ್ದಾರೆ. ಮತ್ತೋರ್ವ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.

ವ್ಹೀಲಿಂಗ್​ ಮಾಡಲು ಮುಂದಾಗಿ ಪ್ರಾಣ ಕಳೆದುಕೊಂಡರು...

ಇಂದು ಬೆಳಗ್ಗೆ 6.30ರ ಸುಮಾರಿಗೆ ಭಾನುವಾರ ರಜೆ ಹಾಗೂ ಗ್ರಹಣ ಹಿನ್ನೆಲೆಯಲ್ಲಿ ಸಂಚಾರ ವಿರಳವಾಗಿರುವುದರಿಂದ ಖಾಲಿ ರಸ್ತೆಯಲ್ಲಿ ವ್ಹೀಲಿಂಗ್​ ಸಾಹಸ ಮಾಡಲು ಹೋಗಿ ಈ ದುರ್ಘಟನೆ ಸಂಭವಿಸಿದೆ‌ ಎಂದು ತಿಳಿದುಬಂದಿದೆ.

ಸದ್ಯ ಘಟನಾ ಸ್ಥಳಕ್ಕೆ ಯಲಹಂಕ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Last Updated : Jun 21, 2020, 2:56 PM IST

ABOUT THE AUTHOR

...view details