ಬೆಂಗಳೂರು: ಇತ್ತೀಚೆಗೆ ಕಾಡುಗೊಂಡನಹಳ್ಳಿಯ ಸಂಡೇ ಮಾರುಕಟ್ಟೆ ರಸ್ತೆಯಲ್ಲಿ ಪ್ರಾಣಿಗಳ ಸಂತಾನ್ಪೋತ್ಪತ್ತಿ ಕೇಂದ್ರಗಳನ್ನು ನಡೆಸುತ್ತಿದ್ದ ವ್ಯಕ್ತಿಯ ಕೊಲೆ ಮಾಡಿದ್ದ ಪ್ರಕರಣದ ಸಂಬಂಧ ಮೂವರನ್ನು ಕೆಜೆ ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಾಡುಗೊಂಡನಹಳ್ಳಿಯ ಸಹೋದರರಾದ ಜಾರ್ಜ್ ಅಲಿಯಾಸ್ ಪಪ್ಪಿ ಮತ್ತು ಜೆರಾಲ್ಡ್, ಸ್ನೇಹಿತ ಡ್ಯಾನಿಯಲ್ ಬಂಧಿತರು. ಆರೋಪಿಗಳು ಆಗಸ್ಟ್ 31ರಂದು ರವಿನಾಯ್ಡು ಎಂಬ ವ್ಯಕ್ತಿಯನ್ನು ಕೆ.ಜೆ. ಹಳ್ಳಿಯ ಸಂಡೇ ಮಾರುಕಟ್ಟೆ ರಸ್ತೆಯಲ್ಲಿ ಬರ್ಬರವಾಗಿ ಕೊಲೆ ಮಾಡಿದ್ದರು.
ಕೊಲೆಗೆ ಕಾರಣವೇನು?
ಮೂವರು ಆರೋಪಿಗಳು ವೃತ್ತಿಯಲ್ಲಿ ಚಾಲಕರಾಗಿದ್ದರು. ಕೊಲೆಯಾದ ರವಿನಾಯ್ಡು ಪ್ರಾಣಿಗಳ ಸಂತಾನ್ಪೋತ್ಪತ್ತಿ ಕೇಂದ್ರಗಳನ್ನು ನಡೆಸುತ್ತಿದ್ದು, ಈತ ಕೂಡ ಇದೇ ಕೆಜೆ ಹಳ್ಳಿ ನಿವಾಸಿಯಾಗಿದ್ದು, ಈ ನಾಲ್ವರು ಆತ್ಮೀಯರಾಗಿದ್ದರು. ಈ ಹಿಂದೆ ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಕಮ್ಮನಹಳ್ಳಿಯಲ್ಲಿ 2017ರಲ್ಲಿ ಲೈಂಗಿಕ ದೌರ್ಜನ್ಯ (354 ಕಾಯ್ದೆ) ಪ್ರಕರಣವೊಂದರಲ್ಲಿ ಜಾರ್ಜ್ ಆರೋಪಿಯಾಗಿದ್ದು, ಜೈಲಿಗೆ ಹೋಗಿ ಹೊರ ಬಂದಿದ್ದ. ಸ್ನೇಹಿತರ ಮುಂದೆಲ್ಲ ಜಾರ್ಜ್‍ನನ್ನು ರೇಪಿಸ್ಟ್ ಎಂದು ರವಿನಾಯ್ಡು ರೇಗಿಸುತ್ತಿದ್ದ.