ಬೆಂಗಳೂರು: ಉಕ್ರೇನ್ ಮೇಲಿನ ರಷ್ಯಾ ಆಕ್ರಮಣ ಮುಂದುವರಿದಿದ್ದು, ಸಂಕಷ್ಟದಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ಕೆಲಸ ಆಗುತ್ತಿದೆ. ಹಂತ ಹಂತವಾಗಿ ಅವರನ್ನು ಕರೆತರಲಾಗುತ್ತಿದ್ದು, ಭಾರತ ಸರ್ಕಾರ ತನ್ನ ಈ ಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಿದೆ. ಶುಕ್ರವಾರದವರೆಗೆ ಉಕ್ರೇನ್ನಿಂದ ಒಟ್ಟು 282 ಕನ್ನಡಿಗರು ತಾಯ್ನಾಡಿಗೆ ಮರಳಿದ್ದಾರೆ.
ಯುದ್ಧಪೀಡಿತ ಉಕ್ರೇನ್ನಿಂದ ತಾಯ್ನಾಡಿಗೆ ಮರಳಿದ ಕನ್ನಡಿಗರು ಎಷ್ಟು ಗೊತ್ತಾ? - kannadigas came from Ukraine
ಯುದ್ಧಪೀಡಿತ ಉಕ್ರೇನ್ನಿಂದ ಈವರೆಗೆ ಒಟ್ಟು 282 ಕನ್ನಡಿಗರು ತಾಯ್ನಾಡಿಗೆ ಮರಳಿದ್ದಾರೆ.
ಉಕ್ರೇನ್ನಿಂದ 282 ಕನ್ನಡಿಗರು ತಾಯ್ನಾಡಿಗೆ ಮರಳಿದ್ದಾ
ಇದನ್ನೂ ಓದಿ:ರಷ್ಯಾ ವಿರುದ್ಧ ನಿರ್ಣಯದ ವಿಶ್ವಸಂಸ್ಥೆಯ ಮತ್ತೊಂದು ಮತದಾನಕ್ಕೂ ಭಾರತ ಗೈರು
ನೋಡಲ್ ಅಧಿಕಾರಿ ಮನೋಜ್ ರಾಜನ್ ನೀಡಿದ ಮಾಹಿತಿ ಪ್ರಕಾರ, ನಿನ್ನೆ 92 ಕನ್ನಡಿಗರು ವಾಪಸ್ ಭಾರತಕ್ಕೆ ಮರಳಿದ್ದಾರೆ. ಆ ಮೂಲಕ ಈವರೆಗೆ ಒಟ್ಟು 282 ಕನ್ನಡಿಗರು ತಾಯ್ನಾಡಿಗೆ ಮರಳಿದ್ದಾರೆ. ಉಳಿದಂತೆ, ಫೆ.27ರಂದು 30 ಮಂದಿ, ಫೆ.28ರಂದು 7, ಮಾ. 1ರಂದು 18, ಮಾ.2ರಂದು 31, ಮಾ.3ರಂದು 104, ಮಾ.4ರಂದು ಅಂದರೆ ನಿನ್ನೆ 92 ಕನ್ನಡಿಗರು ಭಾರತಕ್ಕೆ ಮರಳಿದ್ದಾರೆ.