ಕರ್ನಾಟಕ

karnataka

ETV Bharat / city

ಪರಿಷತ್​​ನ 25 ಸ್ಥಾನಗಳಿಗೆ ಚುನಾವಣೆ: ಯಾರ್ಯಾರ ಅವಧಿ ಮುಗಿಯುತ್ತಿದೆ ಗೊತ್ತಾ? - ಕರ್ನಾಟಕ ವಿಧಾನ ಪರಿಷತ್

75 ಸದಸ್ಯರ ಬಲ ಹೊಂದಿರುವ ವಿಧಾನ ಪರಿಷತ್​​​ನಲ್ಲಿ ಸದ್ಯ ಯಾವುದೇ ಸ್ಥಾನ ತೆರವಾಗಿಲ್ಲ. 75ರ ಪೈಕಿ ಬಿಜೆಪಿ ಒಬ್ಬ ಪಕ್ಷೇತರ (ಅಭಯ್ ಪಾಟೀಲ್) ಬೆಂಬಲದೊಂದಿಗೆ ಒಟ್ಟು 33 ಸದಸ್ಯರ ಬಲ ಹೊಂದಿದೆ. ಉಳಿದಂತೆ ಕಾಂಗ್ರೆಸ್​​ನ 29 ಹಾಗು ಜೆಡಿಎಸ್​​​ನ 13 ಮಂದಿ ಸದಸ್ಯರಿದ್ದಾರೆ. ಇದೀಗ ಇವರಲ್ಲಿ ಶಿಕ್ಷಕ, ಪದವೀಧರ ಕ್ಷೇತ್ರದ ಸದಸ್ಯರೂ ಸೇರಿದಂತೆ ಒಟ್ಟು 25 ಸ್ಥಾನಗಳು ತೆರವಾಗುತ್ತಿವೆ. ಇದನ್ನು ತುಂಬಿಕೊಳ್ಳಲು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹರಸಾಹಸ ನಡೆಸುತ್ತಿವೆ.

Legislative Council
ಕರ್ನಾಟಕ ವಿಧಾನ ಪರಿಷತ್ ಚುನಾವಣೆ

By

Published : Nov 6, 2021, 12:39 PM IST

ಬೆಂಗಳೂರು: ವಿವಿಧ ಕ್ಷೇತ್ರಗಳಿಂದ ಆಯ್ಕೆಯಾಗಿದ್ದ 25 ವಿಧಾನ ಪರಿಷತ್ ಸದಸ್ಯರ 6 ವರ್ಷದ ಅಧಿಕಾರಾವಧಿ ಹೊಸ ವರ್ಷದ ಆರಂಭದಲ್ಲಿ ಕೊನೆಗೊಳ್ಳಲಿದೆ. ಈ ಸ್ಥಾನಗಳಿಗೆ ತಮ್ಮದೇ ಪಕ್ಷದ ಸದಸ್ಯರನ್ನೇ ತುಂಬಿಕೊಳ್ಳಲು ಮೂರು ಪಕ್ಷಗಳು ಪ್ರಯತ್ನ ನಡೆಸಿದ್ದು, ಎಷ್ಟು ಯಶಸ್ಸು ಸಿಗುತ್ತದೆ ಎಂಬ ಕುತೂಹಲ ಮನೆಮಾಡಿದೆ.

ಸದ್ಯ ವಿಧಾನ ಪರಿಷತ್​​ನಲ್ಲಿ ದೊಡ್ಡ ಪಕ್ಷವಾಗಿರುವ ಬಿಜೆಪಿ ಆಡಳಿತ ಪಕ್ಷವಾಗಿಯೂ ತನ್ನ ಬಲ ಹೊಂದಿದೆ. 75 ಸದಸ್ಯರ ಬಲ ಹೊಂದಿರುವ ವಿಧಾನ ಪರಿಷತ್​​​ನಲ್ಲಿ ಸದ್ಯ ಯಾವುದೇ ಸ್ಥಾನ ತೆರವಾಗಿಲ್ಲ. 75ರ ಪೈಕಿ ಬಿಜೆಪಿ ಒಬ್ಬ ಪಕ್ಷೇತರ (ಅಭಯ್ ಪಾಟೀಲ್) ಬೆಂಬಲದೊಂದಿಗೆ ಒಟ್ಟು 33 ಸದಸ್ಯರ ಬಲ ಹೊಂದಿದೆ.

ಉಳಿದಂತೆ ಕಾಂಗ್ರೆಸ್​​ನ 29 ಹಾಗು ಜೆಡಿಎಸ್​​​ನ 13 ಮಂದಿ ಸದಸ್ಯರಿದ್ದಾರೆ. ಇದೀಗ ಇವರಲ್ಲಿ ಶಿಕ್ಷಕ, ಪದವೀಧರ ಕ್ಷೇತ್ರದ ಸದಸ್ಯರೂ ಸೇರಿದಂತೆ ಒಟ್ಟು 25 ಸ್ಥಾನಗಳು ತೆರವಾಗುತ್ತಿವೆ. ಇದನ್ನು ತುಂಬಿಕೊಳ್ಳಲು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹರಸಾಹಸ ನಡೆಸುತ್ತಿವೆ.

ಇದರಲ್ಲಿ ವಿಧಾನಸಭೆಯಿಂದ ವಿಧಾನ ಪರಿಷತ್​ಗೆ ಸ್ಥಳೀಯ ಸಂಸ್ಥೆಗಳಿಂದ ಪರಿಷತ್​​ಗೆ ಸೇರಿದಂತೆ ವಿವಿಧ ವಿಭಾಗಗಳಿಂದ ಸದಸ್ಯರ ಆಯ್ಕೆ ನಡೆಯಲಿದೆ. ಬಿಜೆಪಿ ವಿಧಾನಸಭೆಯಲ್ಲಿ ಹೆಚ್ಚು ಸದಸ್ಯ ಬಲ ಹೊಂದಿರುವುದರಿಂದ ಒಂದಿಷ್ಟು ಹೆಚ್ಚುವರಿ ಸ್ಥಾನ ಗಳಿಸುವ ನಿರೀಕ್ಷೆ ಹೊಂದಿದೆ.

75 ಸದಸ್ಯರ ಬಲವಿರುವ ವಿಧಾನ ಪರಿಷತ್​​​ನಲ್ಲಿ ಸದ್ಯ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುವ ಸದಸ್ಯ ಬಲ ಬಿಜೆಪಿಗೆ ಇಲ್ಲ. ಯಾವುದೇ ವಿಧೇಯಕವನ್ನು ಸ್ವತಂತ್ರವಾಗಿ ಅಂಗೀಕಾರ ಪಡೆಯಲು ಬಿಜೆಪಿ 38 ಸದಸ್ಯರ ಬಲ ಹೊಂದಲೇಬೇಕಾದ ಅನಿವಾರ್ಯತೆ ಇದೆ. ಸದ್ಯ 33 ಸದಸ್ಯರ ಬಲ ಹೊಂದಿದ್ದು, ಜತೆಗೆ ಜೆಡಿಎಸ್ ಬೆಂಬಲದೊಂದಿಗೆ ಅಧಿಕಾರ ನಡೆಸುತ್ತಿದೆ. ಸಭಾಪತಿ ಸ್ಥಾನವನ್ನು ಸಹ ಜೆಡಿಎಸ್​​​ಗೆ ಬಿಟ್ಟುಕೊಟ್ಟಿದೆ.

ಮುಂಬರುವ ಚುನಾವಣೆಯಲ್ಲಿ 25ರಲ್ಲಿ ಅತಿ ಹೆಚ್ಚು ಸ್ಥಾನ ಪಡೆದು 38ಕ್ಕೂ ಹೆಚ್ಚು ಸದಸ್ಯರ ಬಲ ಹೊಂದಿ, ಸ್ವತಂತ್ರ ಅಧಿಕಾರ ಹಿಡಿದು, ಬಿಜೆಪಿಯ ಸಭಾಪತಿಗಳನ್ನೇ ನೇಮಿಸಿಕೊಳ್ಳುವ ಉತ್ಸಾಹದಲ್ಲಿರುವ ಬಿಜೆಪಿಗೆ ಪರಿಸ್ಥಿತಿ ಹೇಗೆ ಸಹಕರಿಸಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

ಲೆಕ್ಕಾಚಾರ:
ಒಟ್ಟು ತೆರವಾಗಲಿರುವ ಸದಸ್ಯರಲ್ಲಿ ಬಿಜೆಪಿಯ-6 ಮತ್ತು ಓರ್ವ ಬೆಂಬಲಿತ ಪಕ್ಷೇತರ ಸದಸ್ಯ ಸೇರಿ 7 ಸ್ಥಾನ. ಕಾಂಗ್ರೆಸ್​​- 13 ಹಾಗು ಜೆಡಿಎಸ್​​​-5 ಸದಸ್ಯರ ಸ್ಥಾನ ತೆರವಾಗಲಿದೆ. ಇವರ ವಿವರ ಗಮನಿಸಿದಾಗ

  • ಬಿಜೆಪಿ- ಕೋಟಾ ಶ್ರೀನಿವಾಸ ಪೂಜಾರಿ (ಸಭಾ ನಾಯಕ)- ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.
  • ಬಿ.ಜಿ. ಪಾಟೀಲ್-ಕಲಬುರಗಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.
  • ಪ್ರದೀಪ್ ಶೆಟ್ಟರ್- ಧಾರವಾಡ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.
  • ಎಂ.ಕೆ. ಪ್ರಾಣೇಶ್ (ಉಪ ಸಭಾಪತಿ) ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.
  • ಸುನೀಲ್ ಸುಬ್ರಹ್ಮಣಿ ಮಂಡೇಪಂಡ-ಬಳ್ಳಾರಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.
  • ಮಹಂತೇಶ್ ಕವಟಗಿಮಠ (ಮುಖ್ಯ ಸಚೇತಕ)- ಬೆಳಗಾವಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.
  • ಅಭಯ್​ ಪಾಟೀಲ್ (ಪಕ್ಷೇತರ)- ಬೆಳಗಾವಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.
  • ಕಾಂಗ್ರೆಸ್-ಎಸ್.ಆರ್. ಪಾಟೀಲ್ (ಪ್ರತಿಪಕ್ಷ ನಾಯಕ)- ವಿಜಯಪುರ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.
  • ಪ್ರತಾಪ್ ಚಂದ್ರ ಶೆಟ್ಟಿ (ಮಾಜಿ ಸಭಾಪತಿ)- ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.
  • ಶ್ರೀಕಾಂತ್ ಲಕ್ಷ್ಮಣ್ ಘೋಟ್ನೇಕರ್- ಉತ್ತರ ಕನ್ನಡ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.
  • ಶ್ರೀನಿವಾಸ್ ಮಾನೆ (ಹಾಲಿ ಶಾಸಕ-ಹಾನಗಲ್)- ಧಾರವಾಡ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.
  • ಆರ್. ಧರ್ಮಸೇನ-ಮೈಸೂರು ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.
  • ವಿಜಯ್ ಸಿಂಗ್- ಬೀದರ್ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.

- ಬಸವರಾಜ್ ಪಾಟೀಲ್ ಇಟಗಿ- ರಾಯಚೂರು ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.

-ಕೆ.ಸಿ. ಕೊಂಡಯ್ಯ-ಬಳ್ಳಾರಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.

-ಆರ್. ಪ್ರಸನ್ನಕುಮಾರ್- ಶಿವಮೊಗ್ಗ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ

-ಎಂ.ಎ. ಗೋಪಾಲಸ್ವಾಮಿ-ಹಾಸನ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.

-ಎಂ. ನಾರಾಯಣಸ್ವಾಮಿ (ಪ್ರತಿಪಕ್ಷ ಸಚೇತಕ)-ಬೆಂಗಳೂರು ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.

- ಎಸ್.ರವಿ- ಬೆಂಗಳೂರು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ. ರಘು ಆಚಾರ್- ಚಿತ್ರದುರ್ಗ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ

  • ಜೆಡಿಎಸ್-ಎನ್.ಅಪ್ಪಾಜಿ ಗೌಡ (ಪ್ರತಿಪಕ್ಷ ಸಚೇತಕ) ಮಂಡ್ಯ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.
  • ಸಂದೇಶ್ ನಾಗರಾಜ್-ಮೈಸೂರು ಸಂಸ್ಥೆಗಳ ಪ್ರತಿನಿಧಿ,
  • ಬಸವರಾಜ ಹೊರಟ್ಟಿ (ಸಭಾಪತಿ)- ಪಶ್ಚಿಮ ಶಿಕ್ಷಕರ ಕ್ಷೇತ್ರ ಪ್ರತಿನಿಧಿ.
  • ಸಿ.ಆರ್. ಮನೋಹರ್- ಕೋಲಾರ ಸಂಸ್ಥೆಗಳ ಪ್ರತಿನಿಧಿ.
  • ಕಾಂತರಾಜು (ಬಿಎಂಎಲ್)- ತುಮಕೂರು ಸಂಸ್ಥೆಗಳ ಪ್ರತಿನಿಧಿ.
  • ಇವುಗಳಲ್ಲೇ ನಾಲ್ಕು ಶಿಕ್ಷಕ, ಪದವೀಧರ ಕ್ಷೇತ್ರಗಳಾದ ಪಶ್ಚಿಮ ಶಿಕ್ಷಕರ ಕ್ಷೇತ್ರ, ವಾಯುವ್ಯ ಶಿಕ್ಷಕರ ಕ್ಷೇತ್ರ, ವಾಯುವ್ಯ ಪದವೀಧರ ಕ್ಷೇತ್ರ , ದಕ್ಷಿಣ ಪದವೀಧರ ಕ್ಷೇತ್ರವೂ ಸೇರಿದೆ.

ಇದನ್ನೂ ಓದಿ:ಇಂದು ದಿನ ಪೂರ್ತಿ ಕಡತ ವಿಲೇವಾರಿಗೆ ಸಿಎಂ ಸಮಯ ಮೀಸಲು

ABOUT THE AUTHOR

...view details