ಕರ್ನಾಟಕ

karnataka

ETV Bharat / city

ವಿದೇಶದಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ 25 ಜನರಿಗೆ ಕೋವಿಡ್ - ರಾಜ್ಯದಲ್ಲಿ ಒಮಿಕ್ರಾನ್ ಭೀತಿ

ವಿವಿಧ ದೇಶಗಳಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ 25 ವ್ಯಕ್ತಿಗಳಲ್ಲಿ ಸೋಂಕು ಕಂಡು ಬಂದಿದ್ದು, ಅವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.

25 foreigners  found covid positive in Bengaluru
ವಿದೇಶದಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ 25 ಜನರಿಗೆ ಕೋವಿಡ್ ಸೊಂಕು ಧೃಡ

By

Published : Jan 5, 2022, 11:12 AM IST

ದೇವನಹಳ್ಳಿ :ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ವಿವಿಧ ದೇಶಗಳಿಂದ ವಿಮಾನದ ಮೂಲಕ ಆಗಮಿಸಿದ 25 ವ್ಯಕ್ತಿಗಳಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.

ಲಂಡನ್​​ನಿಂದ ವಿಮಾನದ ಮೂಲಕ ಆಗಮಿಸಿದ 8 ಪ್ರಯಾಣಿಕರಲ್ಲಿ, ಫ್ರಾನ್ಸ್ 7, ಕತಾರ್ 2, ದುಬೈ 2, ಕುವೈತ್ 1, ಫ್ರಾಂಕ್‌ಫರ್ಟ್ 1 ಹಾಗೂ ಇಥಿಯೋಡ್​​ 1 ಹಾಗೂ ಲುಫ್ಥಾನ್ಸಾ ಮೂಲಕ ಆಗಮಿಸಿದ ಮೂವರು ವ್ಯಕ್ತಿಗಳಲ್ಲಿ ಸೋಂಕು ದೃಢಪಟ್ಟಿದ್ದು, ಅವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ಅವರಿಗೆ ತಗುಲಿರುವ ಸೋಂಕು, ಒಮಿಕ್ರಾನ್ ಹೌದೋ? ಅಲ್ಲವೋ ಎಂದು ತಿಳಿದುಕೊಳ್ಳಲು, ಸೋಂಕಿತರ ಮಾದರಿಯನ್ನು ಜೀನೋಮ್​ ಸೀಕ್ವೆನ್ಸಿಂಗ್​​ಗೆ ಕಳುಹಿಸಲಾಗುತ್ತದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ದೇಶದಲ್ಲಿ ಕೊರೊನಾದ ಆತಂಕಕಾರಿ ಬೆಳವಣಿಗೆ.. ಒಂದೇ ದಿನಕ್ಕೆ ಅರ್ಧ ಲಕ್ಷಕ್ಕೂ ಹೆಚ್ಚು ಕೇಸ್​ ದಾಖಲು!

ABOUT THE AUTHOR

...view details