ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಿದ ಮೇ 24, 2008 ರಿಂದ 2022ರ ಜೂನ್ ಕೊನೆಯ ವಾರದ ಅಂತ್ಯಕ್ಕೆ 25 ಕೋಟಿ ಜನ ಪ್ರಯಾಣಿಸಿದ್ದಾರೆ. ಈ ಮೂಲಕ ದಕ್ಷಿಣ ಭಾರತದ ವಿಮಾನ ನಿಲ್ದಾಣಗಳಲ್ಲಿ ಕೆಐಎಎಲ್ ಹೊಸ ಮೈಲಿಗಲ್ಲು ಸಾಧಿಸಿದೆ. ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮೂರನೇ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇದೆ.
2008 ಮೇ 24 ರಂದು ಕೆಐಎಎಲ್ನಲ್ಲಿ ಪ್ರಯಾಣಿಕರ ವಿಮಾನ ಹಾರಾಟ ಪ್ರಾರಂಭವಾಗಿತ್ತು. 2022ರ ಜೂನ್ ತಿಂಗಳ ಕೊನೆಯ ವಾರಕ್ಕೆ 25 ಕೋಟಿ ಜನ ಪ್ರಯಾಣಿಸಿದ್ದಾರೆ. 20 ಲಕ್ಷ ಏರ್ ಟ್ರಾಫಿಕ್ ಮೂಮೆಂಟ್ಗಳ (ATM) ಮೂಲಕ ದಾಖಲೆ ಸಂಖ್ಯೆಯ ಪ್ರಯಾಣಿಕರು ಏರ್ಪೋರ್ಟ್ ಮೂಲಕ ಪ್ರಯಾಣಿಸಿದ್ದಾರೆ. ಏರ್ಪೋರ್ಟ್ ಮೂಲಕ ಪ್ರಪಂಚದ ವಿವಿಧ ನಗರಗಳಿಗೆ ವಿಮಾನ ಸಂಪರ್ಕ ಮತ್ತು ಅಸ್ಥಿತ್ವದಲ್ಲಿರುವ ವಿಮಾನ ಮಾರ್ಗಗಳಲ್ಲಿ ಹೆಚ್ಚುತ್ತಿರುವ ಸಂಖ್ಯೆ ಪ್ರಯಾಣಿಕರ ಏರಿಕೆಗೆ ಕಾರಣವಾಗಿದೆ.