ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಂಕಿತ ಕೊರೊನಾ ವೈರಸ್ ಪ್ರಯಾಣಿಕರು ಆಗಮಿಸಿದ್ದು, ಚಿಕಿತ್ಸೆಗಾಗಿ ಅವರನ್ನು ದೇವನಹಳ್ಳಿಯ ಆಕಾಶ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕೆಐಎ ನಿಲ್ದಾಣದಲ್ಲಿ ಬಂದಿಳಿದ 22 ಕೊರೊನಾ ವೈರಸ್ ಶಂಕಿತರು?: ಚಿಕಿತ್ಸೆ - ಫ್ರಾನ್ಸ್ನಿಂದ ಬಂದ ಪ್ರಯಾಣಿಕರಿಗೆ ಕೊರೊನಾ
ತಡರಾತ್ರಿ ಫ್ರಾನ್ಸ್ನಿಂದ 15, ದುಬೈನಿಂದ 7 ಪ್ರಯಾಣಿಕರಲ್ಲಿ ಕೊರೊನಾ ವೈರಸ್ ಇರುವ ಸಂಶಯ ವ್ಯಕ್ತವಾಗಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ನಿನ್ನೆ ತಡರಾತ್ರಿ ಫ್ರಾನ್ಸ್ನಿಂದ 13, ದುಬೈನಿಂದ 7 ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಪರೀಕ್ಷೆ ನಡೆಸಿದಾಗ ಕೊರೊನಾ ವೈರಸ್ ಇರುವ ಸಂಶಯ ವ್ಯಕ್ತವಾಗಿದೆ.
ತಕ್ಷಣವೇ ಅವರಿಗೆ ದೇವನಹಳ್ಳಿ ಆಕಾಶ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸಕಲ ಸಿದ್ಧತೆ ಮಾಡಲಾಗಿದೆ. ಹೊಸಕೋಟೆ ಹೊರವಲಯದ ಎಂವಿಜಿ ಆಸ್ಪತ್ರೆಯಲ್ಲೂ ಚಿಕಿತ್ಸೆಗೆ ಸಿದ್ಧತೆ ಮಾಡಲಾಗಿದೆ. ಆರೋಗ್ಯ ಇಲಾಖೆ, ಜಿಲ್ಲಾಡಳಿತದಿಂದ ಪರಿಶೀಲನೆ ನಡೆಸಲಾಗಿದೆ.
Last Updated : Mar 14, 2020, 1:26 PM IST