ಕರ್ನಾಟಕ

karnataka

By

Published : Feb 18, 2021, 9:44 AM IST

Updated : Feb 18, 2021, 10:57 AM IST

ETV Bharat / city

ಬೆಂಗಳೂರೇ ಜೆಎಂಬಿ ಉಗ್ರರ ಪಾಲಿನ ಹಾಟ್​ಸ್ಪಾಟ್: 11 ಶಂಕಿತರ ವಿರುದ್ಧ ಚಾರ್ಜ್ ಶೀಟ್

ದೇಶದಲ್ಲಿ ತಳಮಟ್ಟದಲ್ಲಿ ಉಗ್ರರ ಜಾಲ ಸಕ್ರಿಯವಾಗಿದ್ದು, ಜಮಾತ್ ಉಲ್ ಮುಜಾಹಿದ್ದೀನ್​‌ ಬಾಂಗ್ಲಾದೇಶ ಸಂಘಟನೆಯ (ಜೆಎಂಬಿ) 11 ಶಂಕಿತ ಉಗ್ರರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿದೆ‌.

ರಾಷ್ಟ್ರೀಯ ತನಿಖಾ ತಂಡ
ರಾಷ್ಟ್ರೀಯ ತನಿಖಾ ತಂಡ

ಬೆಂಗಳೂರು: ದೇಶದಲ್ಲಿ ವಿಧ್ವಂಸಕ ಕೃತ್ಯ ಎಸಗುವ ಉಗ್ರರು ಆರ್ಥಿಕ ಉದ್ದೇಶಕ್ಕಾಗಿ ದರೋಡೆಕೋರರ ಸೋಗಿನಲ್ಲಿ ದರೋಡೆ ಮಾಡಿದ್ದಾರೆ ಎಂದು ರಾಷ್ಟ್ರೀಯ ತನಿಖಾ ತಂಡ (ಎನ್ಐಎ) ಪತ್ತೆ ಹಚ್ಚಿದ್ದು‌, ‌ಈ ಸಂಬಂಧ ಶಂಕಿತ ಉಗ್ರರ ವಿರುದ್ಧ ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.

ದೇಶದಲ್ಲಿ ತಳಮಟ್ಟದಲ್ಲಿ ಉಗ್ರರ ಜಾಲ ಸಕ್ರಿಯವಾಗಿದೆ.‌ ಜಮಾತ್ ಉಲ್ ಮುಜಾಹಿದ್ದೀನ್​ ಬಾಂಗ್ಲಾದೇಶ ಸಂಘಟನೆಯ (ಜೆಎಂಬಿ) 11 ಶಂಕಿತ ಉಗ್ರರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿದೆ‌. ನಜೀರ್ ಶೇಖ್, ಆರೀಫ್ ಹುಸೈನ್, ಆಸಿಫ್ ಇಕ್ಬಾಲ್, ಜಹೀದುಲ್ ಇಸ್ಲಾಂ, ಕದೋರ್ ಖಾಜಿ, ಹಬೀಬುರ್ ರೆಹಮಾನ್, ದಿಲ್ವಾರ್ ಹುಸೈನ್, ಮುಸ್ತಾಫಿಜುರ್ ರೆಹಮಾನ್, ಆದಿಲ್ ಶೇಖ್, ಅಬ್ದುಲ್ ಕರೀಂ ಹಾಗೂ ಮುಷರ್ರಫ್ ಹುಸೈಮ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.

ಇನ್ನು ಜಮಾತ್ ಉಲ್ ಮುಜಾಹಿದ್ದೀನ್​‌ ಬಾಂಗ್ಲಾದೇಶ ಸಂಘಟನೆಯ ನಾಯಕ ಜಹೀದುಲ್ ಇಸ್ಲಾಂ, ಭಾರತದಲ್ಲಿ ಜೆಎಂಬಿ ವಿಸ್ತರಣೆಯ ಜವಾಬ್ದಾರಿ ಹೊತ್ತಿದ್ದ. 2005ರ ಬಾಂಗ್ಲಾದೇಶದ ಸರಣಿ ಬಾಂಬ್ ಬ್ಲಾಸ್ಟ್ ಪ್ರಕರಣದ ಆರೋಪಿಯಾಗಿದ್ದು, ಬುರ್ದ್ವಾನ್ ಸ್ಫೋಟ ಪ್ರಕರಣದಲ್ಲೂ ಸಹ ಜಹೀದುಲ್ ಪಾತ್ರವಿರುವುದು ಪತ್ತೆಯಾಗಿದೆ. ಈ ಕುರಿತು ಸದ್ಯಕ್ಕೆ ಎನ್ಐಎಯಿಂದ ತನಿಖೆ ಮುಂದುವರೆದಿದೆ.

ಬೆಂಗಳೂರಿನ 4 ವಿವಿಧ ಠಾಣಾ ವ್ಯಾಪ್ತಿಯ ಕೆ.ಆರ್.ಪುರಂ, ಕೊತ್ತನೂರು, ಅತ್ತಿಬೆಲೆಯಲ್ಲಿ ದರೋಡೆ ನಡೆಸಿರುವುದನ್ನು ಎನ್​ಐಎ ಪತ್ತೆ ಹಚ್ಚಿದೆ‌‌.

Last Updated : Feb 18, 2021, 10:57 AM IST

ABOUT THE AUTHOR

...view details