ಬೆಂಗಳೂರು :ಸಚಿವ ಸ್ಥಾನದ ಆಕಾಂಕ್ಷಿಗಳಿಂದ ನಿಲ್ಲದ ಭಿನ್ನಮತೀಯ ಚಟುವಟಿಕೆ, ಖಾತೆಗಳ ಬದಲಾವಣೆಗೆ ಸಚಿವರಲ್ಲಿ ಸ್ಫೋಟಗೊಂಡ ಅಸಮಾಧಾನ, ಬಿಟ್ ಕಾಯಿನ್ ಹಗರಣ, ಶೇ.40ರಷ್ಟು ಕಮೀಷನ್ ದಂಧೆ ಆರೋಪದಂತಹ ಸಂಕಷ್ಟಗಳಲ್ಲೇ ಬಿಜೆಪಿ 2021ರ ವರ್ಷವನ್ನ ಕಳೆದಿದೆ. ಸಾಲು ಸಾಲು ಸಮಸ್ಯೆಗಳೊಂದಿಗೆ ಪ್ರಸಕ್ತ ವರ್ಷಕ್ಕೆ ವಿದಾಯ ಹೇಳುತ್ತಿರುವ ಬಿಜೆಪಿಯಲ್ಲಿ ನಡೆದ ರೆಬೆಲ್ ಚಟುವಟಿಕೆಗಳ ಕುರಿತ ಪಕ್ಷಿನೋಟ ಇಲ್ಲಿದೆ.
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಂದ ಹಿಡಿದು ಈಗಿನ ಸಿಎಂ ಬಸವರಾಜ ಬೊಮ್ಮಾಯಿವರೆಗೂ ನಾಯಕತ್ವ ಬದಲಾವಣೆ ಕೂಗು ಕೇಳುತ್ತಲೇ ಇದೆ. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಇಳಿಸಿ ಬೊಮ್ಮಾಯಿ ಅವರಿಗೆ ಪಟ್ಟ ಕಟ್ಟಿದರೂ ಸಚಿವಾಕಾಂಕ್ಷಿಗಳ ಭಿನ್ನಮತೀಯ ಚಟುವಟಿಕೆ, ಪರ-ವಿರೋಧದ ಹೇಳಿಕೆಗಳಿಗೆ ಕಡಿವಾಣ ಬಿದ್ದಿಲ್ಲ. ಅವುಗಳ ನಡುವೆ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಹಗರಣಗಳ ಆರೋಪಗಳು ತಳುಕು ಹಾಕಿಕೊಂಡಿದ್ದು, ಹೊಸ ಸಂಕಷ್ಟ ತಂದೊಡ್ಡಿದೆ.
ಜನವರಿ ವಿದ್ಯಮಾನಗಳು :ಶಾಸಕರೊಂದಿಗೆ ಸಿಎಂ ಸಮಾಲೋಚನಾ ಸಭೆ, ನಾಯಕತ್ವ ಬದಲಾವಣೆ ವಿಷಯದ ಚರ್ಚೆಯೂ ಇಲ್ಲ, ಮುಂಬೈ, ಮಧ್ಯ ಕರ್ನಾಟಕ ಭಾಗದ ಶಾಸಕರ ಜೊತೆ ಸಿಎಂ ಸಮಾಲೋಚನೆ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭಾಗಿ, ಸಿಎಂ ಪುತ್ರ ವಿಜಯೇಂದ್ರರಿಂದ ಸರ್ಕಾರದಲ್ಲಿ ಹಸ್ತಕ್ಷೇಪ ಆರೋಪ, ಸಿಎಂ ಸಭೆಯಲ್ಲಿ ಕಿಡಿಕಾರಿದ ಯತ್ನಾಳ್, ಉಮೇಶ್ ಕತ್ತಿ. ಯತ್ನಾಳ್ ಹೊರತು ಎಲ್ಲರೂ ಸಿಎಂ ನಾಯಕತ್ವಕ್ಕೆ ಬೆಂಬಲ, ಸಿಎಂ ಕಾರ್ಯಕ್ಕೆ ತೃಪ್ತಿ.
ಭ್ರಷ್ಟಾಚಾರದ ಆರೋಪಕ್ಕೆ ಸಿಲುಕಿದ ಅಬಕಾರಿ ಸಚಿವ ನಾಗೇಶ್, ಸಿಎಂ ಸೂಚನೆ ಮೇರೆಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ, ಸಿಎಂ ಸಂಪುಟಕ್ಕೆ 7 ಜನರ ಸೇರ್ಪಡೆ, ಸರಳವಾಗಿ ನಡೆದ ಪ್ರತಿಜ್ಞಾವಿಧಿ ಸಮಾರಂಭ, ಸಂಪುಟದಲ್ಲಿ ಸೈನಿಕನಿಗೆ ಅವಕಾಶ, ಬಿಜೆಪಿಯಲ್ಲಿ ಅಸಮಾಧಾನ ಸ್ಪೋಟ, ರಾತ್ರಿ ಅತೃಪ್ತರ ಸಭೆಗೆ ಬಿಜೆಪಿಯಲ್ಲಿ ಸಂಚಲನ.
ಸಚಿವ ಸ್ಥಾನ ಕಳೆದುಕೊಂಡ ನಾಗೇಶ್ಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡಿದ ಸಿಎಂ, ನೂತನ ಸಚಿವರ ಖಾತೆ ಹಂಚಿಕೆ ಪಟ್ಟಿ ಪ್ರಕಟ, ಖಾತೆ ಬದಲಾವಣೆಗೆ ಅಸಮಾಧಾನ, ಸುಧಾಕರ್ ನಿವಾಸದಲ್ಲಿ ವಲಸಿಗ ಸಚಿವರ ಸಭೆ, 7 ಸಚಿವರ ಖಾತೆ ಬದಲಿಸಿದ ಒಂದೇ ದಿನದಲ್ಲಿ ಮತ್ತೆ 6 ಸಚಿವರ ಖಾತೆ ಬದಲಾವಣೆ, ಮೂವರು ಸಚಿವರ ಖಾತೆ ಬದಲಾವಣೆ, ಸುಧಾಕರ್ಗೆ ಮರಳಿ ಸಿಕ್ಕ ವೈದ್ಯಕೀಯ ಶಿಕ್ಷಣ ಖಾತೆ, ಮಾಧುಸ್ವಾಮಿ, ಯೋಗೇಶ್ವರ್ ಖಾತೆ ಅದಲು ಬದಲು ಮಾಡಿದ್ದ ಸಿಎಂ.
ಫೆಬ್ರವರಿಯಲ್ಲಿನ ರಾಜಕೀಯ ವಿದ್ಯಾಮಾನಗಳು :ಕಾವೇರಿಯಲ್ಲಿ ಶಾಸಕರೊಂದಿಗೆ ಡಿನ್ನರ್ ಮೀಟ್, ಸಿಎಂ ಔತಣ ಕೂಟಕ್ಕೆ 25 ಶಾಸಕರ ಗೈರು, ಆತಿಥ್ಯದಿಂದ ದೂರ ಉಳಿದ ಯತ್ನಾಳ್, ಸುನೀಲ್ ಕುಮಾರ್, ಮಾಧುಸ್ವಾಮಿ, ನನ್ನ ಮನೆ ಬಾಗಿಲು ನಿಮಗೆ ಸದಾ ತೆರೆದಿರಲಿದೆ, ಬಂದು ಸಮಸ್ಯೆ ಹೇಳಿಕೊಳ್ಳಿ; ಅಸಮಧಾನಿತರಿಗೆ ಸಿಎಂ ಆಹ್ವಾನ. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ವಿಚಾರ, ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸಿಎಂ ಸೂಚನೆ, ಎಂಎಲ್ಎ ನೇಚರ್ ಎಲ್ಲರಿಗೂ ಗೊತ್ತಿದೆ, ಯತ್ನಾಳ್ ವಿರುದ್ಧ ಸೂಕ್ತ ಸಮಯದಲ್ಲಿ ಕ್ರಮವೆಂದು ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಎಚ್ಚರಿಕೆ.
ಮಾರ್ಚ್ ತಿಂಗಳಲ್ಲಿ ಏನೇನಾಯ್ತು?:ಸಚಿವರೊಬ್ಬರದ್ದು ಎನ್ನಲಾದ ರಾಸಲೀಲೆ ವಿಡಿಯೋ ಬಹಿರಂಗ ; ನಗರ ಪೊಲೀಸ್ ಆಯುಕ್ತರಿಗೆ ದೂರು, ರಾಸಲೀಲೆ ಪ್ರಕರಣದಲ್ಲಿ ಹೈಕಮಾಂಡ್ ರಂಗಪ್ರವೇಶ ; ಜಾರಕಿಹೊಳಿ ರಾಜೀನಾಮೆಗೆ ಸೂಚನೆ, ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ ಸಲ್ಲಿಕೆ, ಯತ್ನಾಳ್ ವಿರುದ್ಧ ಕ್ರಮಕ್ಕೆ ಶಾಸಕರ ಸಹಿ ಸಂಗ್ರಹ. ರೇಣುಕಾಚಾರ್ಯ ನೇತೃತ್ವದಲ್ಲಿ ಸಹಿ ಹಾಕಿದ ಶಾಸಕರು.
ತಮ್ಮ ಇಲಾಖೆಯಲ್ಲಿ ಹಸ್ತಕ್ಷೇಪ ; ಬಿಎಸ್ವೈ ವಿರುದ್ಧ ರಾಜ್ಯಪಾಲರು, ಬಿಜೆಪಿ ಹೈಕಮಾಂಡ್ಗೆ ಹಿರಿಯ ಸಚಿವ ಕೆ.ಎಸ್. ಈಶ್ವರಪ್ಪ ಪತ್ರ, ಈಶ್ವರಪ್ಪ ವಿರುದ್ಧ ಶಾಸಕರು ಗರಂ; ಹೈಕಮಾಂಡ್ಗೆ ದೂರು ನೀಡಲು ಮುಂದಾದ ಶಾಸಕರ ತಂಡ, ಈಶ್ವರಪ್ಪ ನಡೆಗೆ ಆಕ್ಷೇಪ ವ್ಯಕ್ತಪಡಿಸಿ ಸಿಎಂ ಬೆಂಬಲಕ್ಕೆ ನಿಂತ ಸಚಿವರು.
ಏಪ್ರಿಲ್ ತಿಂಗಳಲ್ಲಿ ವಿದ್ಯಮಾನಗಳು :ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ಮಹತ್ವದ ಸರ್ವಪಕ್ಷ ಸಭೆ ಆರಂಭ; ಬೆಂಗಳೂರಿಗೆ ಟಫ್ ರೂಲ್ಸ್ ಜಾರಿ ಕುರಿತು ಚರ್ಚೆ, ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆಗೆ ಪ್ರತಿಪಕ್ಷಗಳಿಂದ ಆಕ್ಷೇಪ, ಚುನಾಯಿತ ಸರ್ಕಾರವಿದ್ದಾಗ ರಾಜ್ಯಪಾಲರು ಸಭೆ ನಡೆಸಿದ್ದು ಸರಿಯಲ್ಲ ಎಂದು ಕಾಂಗ್ರೆಸ್, ಜೆಡಿಎಸ್ ಅಸಮಾಧಾನ.
ಮೇನಲ್ಲಿ ಮತ್ತೆ ಮುನ್ನೆಲೆಗೆ ಬಂದ ಸಿಎಂ ಬದಲು ಕೂಗು:ರಾಜ್ಯದಲ್ಲಿ ಮತ್ತೆ ಮುನ್ನೆಲೆಗೆ ಬಂದ ನಾಯಕತ್ವ ಬದಲಾವಣೆ ಕೂಗು; ಕುತೂಹಲ ಮೂಡಿಸಿದ ಸಿಎಂ ಕಟೀಲ್ ಭೇಟಿ, ನಾಯಕತ್ವ ಬದಲಾವಣೆ ಇಲ್ಲ ಎನ್ನುತ್ತಲೇ ರಾಜಕೀಯ ಚಟುವಟಿಕೆಯ ಕೇಂದ್ರವಾದ ಸಿಎಂ ನಿವಾಸ; ಬಿ.ಎಲ್ ಸಂತೋಷ್ ಭೇಟಿ ಮೂಡಿಸಿದ ಕುತೂಹಲ, ಸಿಎಂ ವಿರೋಧಿ ಬಣದಿಂದ ಈ ಬಾರಿ ನಾಯಕತ್ವ ಬದಲಾವಣೆ ಫಿಕ್ಸ್ ಎನ್ನವ ಗೂಗ್ಲಿಗೆ ಬಿಎಸ್ವೈ ಪರ ಬೆಂಬಲಿಗರ ಬ್ಯಾಟಿಂಗ್, ಯಡಿಯೂರಪ್ಪ ಸರ್ವ ಸಮ್ಮತ ನಾಯಕ, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂದು ಕಟೀಲ್ ಸಮರ್ಥನೆ. ಪಕ್ಷದಲ್ಲಿ ಮತ್ತೆ ಶುರುವಾದ ಆಂತರಿಕ ಕಲಹ; ವರಿಷ್ಠರಿಗೆ ವರದಿ ನೀಡಿದ ರಾಜ್ಯ ಘಟಕ, ಅಚ್ಚರಿ ಮೂಡಿಸಿದ ಸಿಎಂ ಪುತ್ರ ವಿಜಯೇಂದ್ರ ದೆಹಲಿ ಭೇಟಿ
ಜೂನ್ನಲ್ಲಿ ಸಿಎಂ ಬದಲು ಹೇಳಿಕೆ ಕುತೂಹಲ:ಹೈಕಮಾಂಡ್ ಹೇಳಿದ ತಕ್ಷಣ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ; ಬಿಎಸ್ವೈ ರಾಜೀನಾಮೆ ಹೇಳಿಕೆ ನೀಡುತ್ತಿದ್ದಂತೆ ಸಿಎಂ ನಿವಾಸಕ್ಕೆ ದೌಡಾಯಿಸಿದ ಹಿರಿಯ ಸಚಿವರು, ಶಾಸಕಾಂಗ ಪಕ್ಷದ ಸಭೆಗೆ ಶಾಸಕ ಸುನೀಲ್ ಕುಮಾರ್ ಒತ್ತಾಯ; ಬಿಜೆಪಿಯಲ್ಲಿ ನಿಲ್ಲದ ಅಸಮಧಾನದ ಹೊಗೆ, ರಾಜ್ಯ ಬಿಜೆಪಿ ಪಾಳಯದಲ್ಲಿ ಬಣ ರಾಜಕೀಯ.
ಹೈಕಮಾಂಡ್ ರಂಗಪ್ರವೇಶ, ಮುಖ್ಯಮಂತ್ರಿಗಳ ಬದಲಾವಣೆ ಬೇಡಿಕೆ ಇರುವುದು ನಿಜವೆಂದು ಹೇಳಿಕೆ ನೀಡಿ ವಿವಾದ ಸೃಷ್ಠಿಸಿದ ಈಶ್ವರಪ್ಪ, ಅಸಮಾಧಾನಿತ ಶಾಸಕರ ಅಹವಾಲು ಕೇಳಲು ರಾಜ್ಯಕ್ಕೆ ಆಗಮಿಸಿದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಟೆಲೆಫೋನ್ ಕದ್ದಾಲಿಕೆ ಬಾಂಬ್ ಸಿಡಿಸಿದ ಶಾಸಕ ಅರವಿಂದ ಬೆಲ್ಲದ್!