ಬೆಂಗಳೂರು: ಗಾಂಜಾ ತಂದು ಸರ್ಕಾರಿ ಬಸ್ಗಳಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರು ಬಿಎಂಟಿಸಿ ನೌಕರರನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ. ವಿಠ್ಠಲ್ ಭಜಂತ್ರಿ ಮತ್ತು ಶರಣಬಸಪ್ಪ ಬಂಧಿತರು. ಆರೋಪಿಗಳಿಂದ 9.8 ಕೆ.ಜಿ. ಗಾಂಜಾ ವಶಕ್ಕೆ ಪಡೆಯಲಾಗಿದೆ.
ಬಿಎಂಟಿಸಿಯಲ್ಲಿ ಚಾಲಕ ಮತ್ತು ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದ ಆರೋಪಿಗಳು ಗಾಂಜಾ ಮಾರಾಟ ಮಾಡುತ್ತಿದ್ದರು. ಸರ್ಕಾರಿ ಬಸ್ಗಳಲ್ಲಿ ಸಾರಿಗೆ ನೌಕರರಿಗೆ ಮುಕ್ತ ಓಡಾಟಕ್ಕೆ ಅವಕಾಶ ನೀಡಿರುವುದನ್ನು ದುರ್ಬಳಕೆ ಮಾಡಿ ಕೃತ್ಯ ಎಸಗಿದ್ದಾರೆ.