ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇಂದು ಒಂದೇ ದಿನ 196 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಅಲ್ಲದೆ ಓರ್ವ ಸೋಂಕಿತ ಸಾವನ್ನಪ್ಪಿದ್ದಾನೆ.
ರಾಜ್ಯವನ್ನು ಬಿಡುತ್ತಿಲ್ಲ 'ಮಹಾ' ನಂಜು: ಇಂದು ಒಂದೇ ದಿನ ಬರೋಬ್ಬರಿ 196 ಹೊಸ ಕೇಸ್ ಪತ್ತೆ!
ಇಂದು ಒಂದೇ ದಿನ 196 ಹೊಸ ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಓರ್ವ ರೋಗಿ ಸಾವನ್ನಪ್ಪಿದ್ದಾನೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,939ಕ್ಕೆ ಏರಿಕೆಯಾಗಿದೆ.
ಇಂದು ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ನಲ್ಲಿ ಮಂಡ್ಯ - 28 , ರಾಯಚೂರು - 38, ಯಾದಗಿರಿ - 72, ಚಿಕ್ಕಬಳ್ಳಾಪುರ - 20, ಗದಗ - 15, ರಾಯಚೂರು - 38, ಬೆಂಗಳೂರು - 4, ದಕ್ಷಿಣ ಕನ್ನಡ - 3 ಸೋಂಕಿತರು ಕಂಡು ಬಂದಿದ್ದಾರೆ. ಆದರಲ್ಲೂ ಮುಂಬೈನಿಂದ ಬಂದ ಕಾರ್ಮಿಕರಲ್ಲೇ ಹೆಚ್ಚು ಕೇಸ್ಗಳು ಪತ್ತೆಯಾಗಿದೆ. ಮುಂಬೈ ಕೊರೊನಾ ನಂಟಿನಿಂದಲೇ 184 ಪ್ರಕರಣಗಳು ಪತ್ತೆಯಾಗಿವೆ. ಜೊತೆಗೆ 15 ವರ್ಷದೊಳಗಿನ 35 ಮಕ್ಕಳಿಗೆ ಕೋವಿಡ್-19 ತಗುಲಿರುವುದು ತಿಳಿದು ಬಂದಿದೆ.
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,939ಕ್ಕೆ ಏರಿಕೆಯಾಗಿದ್ದು, ಒಟ್ಟು ಪ್ರಕರಣಗಳ ಪೈಕಿ 1,297 ಆ್ಯಕ್ಟೀವ್ ಕೇಸ್ಗಳಿದ್ದರೆ, 598 ಮಂದಿ ಗುಣಮುಖರಾಗಿದ್ದಾರೆ. ಮೃತರ ಸಂಖ್ಯೆ 42ಕ್ಕೆ ಏರಿಕೆಯಾಗಿದೆ.