ಬೆಂಗಳೂರು:ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಕೇವಲ ಒಂದು ವಾರದ ಹಿಂದೆ ಐನೂರು ಇದ್ದ ಕೊರೊನಾ ಸೋಂಕಿತರ ಸಂಖ್ಯೆ ಕೇವಲ ನಾಲ್ಕು ದಿನಗಳ ಅಂತರದಲ್ಲಿ 692ಕ್ಕೆ ಏರಿಕೆ ಆಗಿದೆ. ಈ ಮೂಲಕ 700ರ ಗಡಿ ದಾಟಲು ಸಿದ್ಧವಾಗಿದೆ.
ರಾಜ್ಯದಲ್ಲಿ 700ರತ್ತ ಸೋಂಕಿತರು, ಬಾಗಲಕೋಟೆಯಲ್ಲೇ 13 ಮಂದಿಗೆ ಮಾರಕ ರೋಗದ ಬಾಧೆ - ಕರ್ನಾಟಕ ಸರ್ಕಾರ
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಸೋಂಕಿತರ ಸಂಖ್ಯೆ 700ರ ಗಡಿಯಲ್ಲಿದೆ. ಬಾಗಲಕೋಟೆಯೊಂದರಲ್ಲೇ 13 ಮಂದಿ ಕೊರೊನಾ ಸೋಂಕಿತರು ಇಂದು ಪತ್ತೆಯಾಗಿದ್ದಾರೆ.
![ರಾಜ್ಯದಲ್ಲಿ 700ರತ್ತ ಸೋಂಕಿತರು, ಬಾಗಲಕೋಟೆಯಲ್ಲೇ 13 ಮಂದಿಗೆ ಮಾರಕ ರೋಗದ ಬಾಧೆ corona](https://etvbharatimages.akamaized.net/etvbharat/prod-images/768-512-7081853-thumbnail-3x2-rajesh.jpg)
ಕಳೆದೆರೆಡು ದಿನಗಳಿಂದ ದಾವಣಗೆರೆಯಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತರ ಪ್ರಕರಣಗಳು ಪತ್ತೆಯಾಗುತ್ತಿದ್ದವು. ಆದರೆ ಇಂದು ಬಾಗಲಕೋಟೆಯಲ್ಲಿ ರೋಗಿಗಳು ಹೆಚ್ಚಾಗಿ ಪತ್ತೆಯಾಗಿದ್ದಾರೆ. ಇದಕ್ಕೂ ಮೊದಲು ಬಾಗಲಕೋಟೆಯಲ್ಲಿ ಕೇವಲ ಒಬ್ಬರಿಗೆ ಸೋಂಕು ಇದ್ದು, ರೋಗಿ ಸಂಖ್ಯೆ 607 ಆದ 23 ವರ್ಷದ ಯುವತಿಯ ಸಂಪರ್ಕದಿಂದ 12 ಮಂದಿಗೆ ಸೋಂಕು ತಗುಲಿದೆ.
ಅಷ್ಟು ಮಾತ್ರವಲ್ಲ, ಬೆಂಗಳೂರು ನಗರದಲ್ಲಿ ಇಬ್ಬರಲ್ಲಿ, ಕಲಬುರಗಿಯಲ್ಲಿ ಒಬ್ಬರಿಗೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 11 ವರ್ಷದ ಬಾಲಕಿ ಸೇರಿ ಮೂವರಿಗೆ, ಕೊರೊನಾ ಸೋಂಕು ಪತ್ತೆಯಾಗಿದೆ. ಇಂದಿನ ವರದಿಯಂತೆ ರಾಜ್ಯದಲ್ಲಿ ಸೋಂಕಿತರ ಸಾವಿನ ಸಂಖ್ಯೆ 29 ಇದ್ದು, 14 ಮಂದಿ ಇಂದು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ರಾಜ್ಯದಲ್ಲಿ ಒಟ್ಟು 345 ಮಂದಿ ಸೋಂಕಿನಿಂದ ಚೇತರಿಕೆ ಕಂಡಿದ್ದಾರೆ.