ಕರ್ನಾಟಕ

karnataka

ETV Bharat / city

17 ದಿನದ ಕಂದಮ್ಮ ಕೊರೊನಾಗೆ ಬಲಿ: ಅನಾಥ ಶವದಂತೆ ನಡೆದೋಯ್ತು ಹಸುಗೂಸಿನ ಅಂತ್ಯಕ್ರಿಯೆ

ಎದೆಗೆ ಅಪ್ಪಿಕೊಂಡು ಮುದ್ದಿಸಿಕೊಳ್ಳಬೇಕಾದ ಕಂದಮ್ಮ ಕೊರೊನಾಗೆ ಬಲಿಯಾಗಿದೆ. ಅನಾಥ ಶವದಂತೆ ಹಸುಗೂಸಿನ ಅಂತ್ಯಕ್ರಿಯೆ ನಡೆದಿದೆ. ತಾನು ಹೆತ್ತ ಕಂದಮ್ಮ ಸೋಂಕಿಗೆ ಬಲಿಯಾಗಿದ್ದು, ತನ್ನ ಕರುಳ ಬಳ್ಳಿಯನ್ನೇ ನೋಡಲಾಗದ ಸ್ಥಿತಿಯಲ್ಲಿ ಹೆತ್ತವರು ವೇದನೆ ಅನುಭವಿಸುವಂತಾಗಿದೆ.

baby
ಕಂದಮ್ಮ

By

Published : Jul 5, 2020, 1:12 PM IST

ಬೆಂಗಳೂರು: ಕೊರೊನಾ ಸೃಷ್ಟಿಸಿರುವ ಕಣ್ಣೀರ ಕಥೆಗಳು ಒಂದಲ್ಲ ಎರಡಲ್ಲ. ಈ ಮಾರಕ ವೈರಸ್​ ತಂದಿಟ್ಟಿರುವ ಪರಿಸ್ಥಿತಿ ಕರುಳು ಹಿಂಡುತ್ತಿದೆ. 17 ದಿನದ ಕಂದಮ್ಮ ಈ ಮಹಾಮಾರಿಗೆ ಬಲಿಯಾಗಿದ್ದು, ತನ್ನ ಕರುಳ ಬಳ್ಳಿಯನ್ನೇ ನೋಡಲಾಗದ ಸ್ಥಿತಿಯಲ್ಲಿ ಹೆತ್ತವರು ಕಣ್ಣೀರು ಹಾಕುತ್ತಿದ್ದಾರೆ.

ಎದೆಗೆ ಅಪ್ಪಿಕೊಂಡು ಮುದ್ದಿಸಿಕೊಳ್ಳಬೇಕಾದ ಕಂದಮ್ಮ ಕೊರೊನಾಗೆ ಬಲಿಯಾಗಿದೆ. ಇತ್ತ ಅನಾಥ ಶವದಂತೆ ಹಸುಗೂಸಿನ ಅಂತ್ಯಕ್ರಿಯೆ ನಡೆದಿದೆ. ಬೆಳ್ಳಂದೂರಿನ ಖಾಸಗಿ ಆಸ್ಪತ್ರೆಯಲ್ಲಿ ಜುಲೈ 1 ರಂದು ಚಿಕಿತ್ಸೆ ಫಲಿಸದೆ ಮಗು ಸಾವನ್ನಪ್ಪಿರುವುದು ತಡವಾಗಿ‌ ಬೆಳಕಿಗೆ ಬಂದಿದೆ.

ಮಗುವಿನ ತಂದೆ-ತಾಯಿಗೂ ಕೊರೊನಾ ಪಾಸಿಟಿವ್ ಬಂದಿದ್ದು, ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.‌‌

ಅತ್ತ ಹೆಬ್ಬಾಳದ ವಿದ್ಯುತ್ ಚಿತಾಗಾರಕ್ಕೆ ಪುಟ್ಟ ಕವರ್​ನಲ್ಲಿ ಸುತ್ತಿದ ಮಗುವಿನ ಮೃತದೇಹವನ್ನು ಆರೋಗ್ಯ ಸಿಬ್ಬಂದಿ ಆ್ಯಂಬುಲೆನ್ಸ್​ನಲ್ಲಿ ತೆಗೆದುಕೊಂಡು ಬಂದಿದ್ದಾರೆ. ಅನಾಥವಾಗಿ ಕಂದಮ್ಮನ ಅಂತ್ಯಕ್ರಿಯೆ ಮಾಡುವಾಗ ಆರೋಗ್ಯ ಇಲಾಖೆಯ ಸಿಬ್ಬಂದಿ ಸಹ ಕಣ್ಣೀರು ಹಾಕಿದ್ದಾರೆ.‌ ಚಿತಾಗಾರದ ನಿರ್ವಹಣೆ ಮಾಡುವ ಸುರೇಶ್ ಎಂಬುವರು, ಸರ್ಕಾರಿ ಶುಲ್ಕವನ್ನು ಪಡೆಯದೆ, ತಾವೇ ಸ್ವತಃ ಶುಲ್ಕ ಭರಿಸಿದ್ದಾರೆ.

ABOUT THE AUTHOR

...view details