ಬೆಂಗಳೂರು: ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಮುಗಿದ ಬೆನ್ನಲ್ಲೇ 16 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಲೋಕಸಭಾ ಚುನಾವಣೆ ವೇಳೆ ಚುನಾವಣಾ ಆಯೋಗದ ಸೂಚನೆ ಮೇರೆಗೆ ವರ್ಗಾವಣೆಗೊಂಡಿದ್ದ ಕೆಲ ಐಎಎಸ್ ಅಧಿಕಾರಿಗಳನ್ನು ಮತ್ತೆ ಹಿಂದಿನ ಸ್ಥಾನಕ್ಕೆ ನೇಮಿಸಲಾಗಿದೆ.
ಬೆಂಗಳೂರು: ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಮುಗಿದ ಬೆನ್ನಲ್ಲೇ 16 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಲೋಕಸಭಾ ಚುನಾವಣೆ ವೇಳೆ ಚುನಾವಣಾ ಆಯೋಗದ ಸೂಚನೆ ಮೇರೆಗೆ ವರ್ಗಾವಣೆಗೊಂಡಿದ್ದ ಕೆಲ ಐಎಎಸ್ ಅಧಿಕಾರಿಗಳನ್ನು ಮತ್ತೆ ಹಿಂದಿನ ಸ್ಥಾನಕ್ಕೆ ನೇಮಿಸಲಾಗಿದೆ.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಿಂಧು ಪ್ರಕರಣದಲ್ಲಿ ಮಂಜುಶ್ರೀ ಆರೋಪ ಕೇಳಿಬಂದಿತ್ತು. ಸುಮಲತಾ ಅಂಬರೀಶ್ ಅವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಹೀಗಾಗಿ, ಮಂಜುಶ್ರೀ ಅವರನ್ನು ಚನಾವಣಾಧಿಕಾರಿ ಆದೇಶದಂತೆ ರಾಜ್ಯ ಸರ್ಕಾರದ ಕಾರ್ಯದರ್ಶಿ ವರ್ಗಾವಣೆ ಮಾಡಿದ್ದರು. ಈಗ ಮಂಜುಶ್ರೀ ಅವರನ್ನು ಮತ್ತೆ ಮಂಡ್ಯ ಜಿಲ್ಲಾಧಿಕಾರಿಯಾಗಿ ವರ್ಗಾಯಿಸಲಾಗಿದೆ. ಅದೇ ರೀತಿ ಡಾ. ಎಸ್.ಬಿ. ಬೊಮ್ಮನಹಳ್ಳಿ ಅವರನ್ನು ಸಹ ಮತ್ತೆ ಬೆಳಗಾವಿ ಜಿಲ್ಲಾಧಿಕಾರಿ ಹುದ್ದೆಗೆ ನೇಮಿಸಲಾಗಿದೆ.
ವರ್ಗಾವಣೆಗೊಂಡಿರುವ 16 ಮಂದಿ ಐಎಎಸ್ ಅಧಿಕಾರಿಗಳ ಪಟ್ಟಿ ಈ ರೀತಿ ಇದೆ:
ತುಷಾರ್ ಗಿರಿನಾಥ್ - ಅಧ್ಯಕ್ಷರು, ಬಿಡಬ್ಲ್ಯೂಎಸ್ ಎಸ್ ಬಿ ಬೆಂಗಳೂರು
ಟಿ.ಕೆ. ಅನಿಲ್ ಕುಮಾರ್ – ಕಾರ್ಯದರ್ಶಿ, ಪ್ರವಾಸೋದ್ಯಮ ಇಲಾಖೆ
ಡಾ.ಪಿ.ಸಿ. ಜಾಫರ್ – ಆಯುಕ್ತರು, ಸಾರ್ವಜನಿಕ ನಿರ್ದೇಶನಾಲಯ
ಶಿವಯೋಗಿ ಸಿ. ಕಳಸದ - ವ್ಯವಸ್ಥಾಪಕ ನಿರ್ದೇಶಕರು, ಕೆಎಸ್ಆರ್ಟಿಸಿ ಬೆಂಗಳೂರು (ಬೆಂಗಳೂರು ಪ್ರಾದೇಶಿಕ ಆಯುಕ್ತರಾಗಿಯೂ ಕಳಸದ ಮುಂದುವರಿಕೆ)
ಡಾ. ವಿಶಾಲ್ ಆರ್ - ಆಯುಕ್ತರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಏಜೆನ್ಸಿ
ಡಾ.ಲೋಕೇಶ್ ಎಂ - ವಿಶೇಷ ಆಯುಕ್ತರು, ಬಿಬಿಎಂಪಿ
ಡಿ.ರಣದೀಪ್ - ಹೆಚ್ಚುವರಿ ಆಯುಕ್ತರು, ಬಿಬಿಎಂಪಿ
ಎಸ್ .ಎಸ್. ನಕುಲ್ - ನಿರ್ದೇಶಕರು, ಮಾಹಿತಿ ತಂತ್ರಜ್ಞಾನ, ಬಯೋ ಟೆಕ್ನಾಲಜಿ ಇಲಾಖೆ
ಎಂ.ಕನಕವಲ್ಲಿ- ಆಯುಕ್ತರು, ಗ್ರಾಮೀಣಾಭಿವೃದ್ಧಿ ಇಲಾಖೆ
ಮಂಜುಶ್ರೀ ಎನ್ – ಜಿಲ್ಲಾಧಿಕಾರಿ, ಮಂಡ್ಯ
ಡಾ.ಎಸ್.ಬಿ. ಬೊಮ್ಮನಹಳ್ಳಿ- ಜಿಲ್ಲಾಧಿಕಾರಿ, ಬೆಳಗಾವಿ
ಡಾ.ಅವಿನಾಶ್ ಮೆನನ್ ರಾಜೇಂದ್ರನ್ - ಹೆಚ್ಚುವರಿ ಆಯುಕ್ತರು, ವಾಣಿಜ್ಯ ತೆರಿಗೆ
ಲಕ್ಷ್ಮೀಕಾಂತ್ ರೆಡ್ಡಿ- ಡಿಪಿಎಆರ್ಗೆ ವರ್ಗಾವಣೆ
ಪಾಟೀಲ್ ಯಲಗೌಡ ಶಿವನಗೌಡ - ಜಿಲ್ಲಾಧಿಕಾರಿ, ವಿಜಯಪುರ
ವಿ.ಯಶವಂತ - ಪ್ರಾದೇಶಿಕ ಆಯುಕ್ತರು, ಮೈಸೂರು
ಪಿ.ಎ. ಮೇಘಣ್ಣವರ್ - ಪ್ರಾದೇಶಿಕ ಆಯುಕ್ತರು, ಬೆಳಗಾವಿ