ಬೆಂಗಳೂರು:ಐ ಮಾನಿಟರ್ ಅಡ್ವೈಸರಿ (ಐಎಂಎ) ಸಂಸ್ಥೆಯು ಹೂಡಿಕೆದಾರರಿಗೆ ವಂಚಿಸಿದ್ದ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ಆರ್.ರೋಷನ್ ಬೇಗ್ ಅವರಿಗೆ ಸೇರಿದ ಆಸ್ತಿಯನ್ನು ಸರ್ಕಾರ ಜಪ್ತಿ ಮಾಡಿದೆ. ಹೈಕೋರ್ಟ್ ಚಾಟಿ ಬೀಸಿದ ಬಳಿಕ ಎಚ್ಚೆತ್ತ ಸರ್ಕಾರ ಮಾಜಿ ಸಚಿವರ ಆಸ್ತಿಯನ್ನು ಜಪ್ತಿ ಮಾಡಿದೆ.
ಸಚಿವರಿಂದ ಜಪ್ತಿ ಮಾಡಿದ ಆಸ್ತಿಯ ವಿವರ ಹೀಗಿದೆ...
ರೋಷನ್ ಬೇಗ್ ಅವರು 2018ರಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ವಿವರದಲ್ಲಿದ್ದ ಆಸ್ತಿಯನ್ನು ಕೆಪಿಐಡಿ ಕಾಯ್ದೆಯ ಸೆಕ್ಷನ್ 3ರ ಅಡಿಯಲ್ಲಿ ರಾಜ್ಯ ಸರ್ಕಾರ ಜಪ್ತಿ ಮಾಡಿದೆ. ರೋಷನ್ ಬೇಗ್ ಮತ್ತವರ ಪತ್ನಿ ಒಡೆತನದ ಒಟ್ಟು 16.81 ಕೋಟಿ ರೂಪಾಯಿ ಮೊತ್ತದ ಆಸ್ತಿಯನ್ನು ಸೀಜ್ ಮಾಡಲಾಗಿದೆ.
1) ಜಪ್ತಿಯಾದ 6 ಬ್ಯಾಂಕ್ ಅಕೌಂಟ್‌ಗಳಲ್ಲಿನ 2.32 ಕೋಟಿ ನಗದು ವಿವರ
ಕೋ ಆಪರೇಟಿವ್ ಬ್ಯಾಂಕ್ - ವಿಧಾನಸೌಧ ಶಾಖೆ - 33 ಲಕ್ಷ ರೂ.
ಕಾರ್ಪೋರೇಷನ್ ಬ್ಯಾಂಕ್ - ಸದಾಶಿವನಗರ ಶಾಖೆ - 4,265 ರೂ.
ಕೆನರಾ ಬ್ಯಾಂಕ್ - ವಸಂತನಗರ ಶಾಖೆ - 16 ಲಕ್ಷ ರೂ.
ಹೆಚ್‌ಡಿಎಫ್‌ಸಿ ಬ್ಯಾಂಕ್ - ತಿಪ್ಪಸಂದ್ರ ಶಾಖೆ - 1.08 ಕೋಟಿ ರೂ.
ಸಿಂಡಿಕೇಟ್ ಬ್ಯಾಂಕ್ - ಪ್ರೇಜರ್ ಟೌನ್ ಶಾಖೆ - 88 ಸಾವಿರ ರೂ.
ಕೆನರಾ ಬ್ಯಾಂಕ್ - ಜಯನಗರ ಶಾಖೆ - 76 ಲಕ್ಷ ರೂಪಾಯಿ
2) ಜಪ್ತಿಯಾದ 8.91 ಕೋಟಿ ಮೌಲ್ಯದ ನಿವೇಶನಗಳ ವಿವರ
HBR ಲೇಔಟ್ - 4 ಸಾವಿರ ಚದರ ಅಡಿ ಸೈಟ್
ಪ್ರೇಜರ್ ಟೌನ್ - 5,545 ಸಾವಿರ ಚದರ ಅಡಿ ಸೈಟ್
ಪ್ರೇಜರ್ ಟೌನ್ - 1,844 ಸಾವಿರ ಚದರ ಅಡಿ ಸೈಟ್
3) ಜಪ್ತಿಯಾದ 2 ವಾಣಿಜ್ಯ ಸಂಕೀರ್ಣಗಳ ಮೌಲ್ಯ 1.73 ಕೋಟಿ ರೂಪಾಯಿ ವಿವರ
ಹೊಸೂರು ರಸ್ತೆಯ 30,217 ಚ. ಅಡಿಗಳ ವಾಣಿಜ್ಯ ಪ್ಲಾಟ್
ರೆಸಿಡೆನ್ಸಿ ರಸ್ತೆ ಪ್ರೆಸ್ಟೀಜ್ ಟವರ್‌ನಲ್ಲಿರುವ 1979 ಚ.ಅಡಿಯ ಪ್ಲಾಟ್
4) ಜಪ್ತಿಯಾದ 2 ಮನೆಗಳ ಮೌಲ್ಯ 3.64 ಕೋಟಿ ರೂಪಾಯಿ
5) ಜಪ್ತಿಯಾದ ಚಿನ್ನಾಭರಣ ಮತ್ತು ಬೆಳ್ಳಿ ವಸ್ತುಗಳ ಮೌಲ್ಯ 42.4 ಲಕ್ಷ ರೂಪಾಯಿ
6) ಜಪ್ತಿಯಾದ ವಿವಿಧ ಕಂಪೆನಿಗಳ ಶೇರುಗಳ ಮೌಲ್ಯ 6.80 ಲಕ್ಷ ರೂಪಾಯಿ