ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ದಿನೇ ದಿನೇ ಕ್ಲಸ್ಟರ್ ಆಗಿ ಹರಡುತ್ತಿದೆ. ಸದ್ಯ ನ್ಯೂ ಬಿಇಎಲ್ ರೋಡ್ನಲ್ಲಿರುವ 1522 ದಿ ಪಬ್ನ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಬೆಂಗಳೂರು: 1522-ದಿ ಪಬ್ನ 16 ಜನ ಸಿಬ್ಬಂದಿಗೆ ತಗುಲಿದ ಕೋವಿಡ್ - ಬೆಂಗಳೂರು ಕೋವಿಡ್ ವರದಿ
ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ವೇಗವಾಗಿ ಹರಡುತ್ತಿದೆ. ಇಂದು ಬೆಂಗಳೂರಿನ ನ್ಯೂ ಬಿಇಎಲ್ ರೋಡ್ನಲ್ಲಿರುವ 1522 ದಿ ಪಬ್ನ 16 ಸಿಬ್ಬಂದಿಗೆ ಕೋವಿಡ್ ಸೋಂಕು ತಗುಲಿರುವುದು ಪರೀಕ್ಷೆ ವೇಳೆ ತಿಳಿದುಬಂದಿದೆ.
![ಬೆಂಗಳೂರು: 1522-ದಿ ಪಬ್ನ 16 ಜನ ಸಿಬ್ಬಂದಿಗೆ ತಗುಲಿದ ಕೋವಿಡ್ 1522 ದಿ ಪಬ್ ಬೆಂಗಳೂರು](https://etvbharatimages.akamaized.net/etvbharat/prod-images/768-512-11195908-134-11195908-1616947988901.jpg)
1522 ದಿ ಪಬ್ ಬೆಂಗಳೂರು
87 ಜನರನ್ನ ಕೊರೊನಾ ಪರೀಕ್ಷೆಗೆ ಒಳಪಡಿಸಿದಾಗ ಅದರಲ್ಲಿ 16 ಜನರ ವರದಿ ಪಾಸಿಟಿವ್ ಬಂದಿದ್ದು, ಸೋಂಕಿತರನ್ನು ಚಿಕಿತ್ಸೆಗೆ ಒಳಪಡಿಸಲಾಗಿದೆ.
ಇತ್ತ ಹಜ್ ಭವನದ ಕೋವಿಡ್ ಕೇರ್ ಸೆಂಟರ್ನಲ್ಲಿ ಇಂದು ಮಧ್ಯಾಹ್ನ 2 ರಿಂದ ರಾತ್ರಿ 8 ಗಂಟೆಯವರೆಗೆ 22 ಪುರುಷರು, 8 ಮಂದಿ ಮಹಿಳೆಯರನ್ನ ಇರಿಸಲಾಗಿದೆ. ಐವರು ಸೋಂಕಿತರು ದಾಖಲಾಗಿದ್ದು, ಒಬ್ಬರನ್ನ ರೆಫರಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.