ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಈ ಸರಪಳಿಯ ಲಿಂಕ್ ಬ್ರೇಕ್ ಮಾಡಬೇಕಾದರೆ ಏಳು ದಿನದ ಬದಲು 15 ದಿನ ಲಾಕ್ಡೌನ್ ಮಾಡಬೇಕೆಂದು ಬಿಬಿಎಂಪಿ ಮೇಯರ್ ಹಾಗೂ ಆಯುಕ್ತರು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೂ ತರಲು ನಿರ್ಧರಿಸಿದ್ದಾರೆ.
ಬೆಂಗಳೂರಲ್ಲಿ 15 ದಿನ ಲಾಕ್ಡೌನ್ ಅಗತ್ಯ ಎಂದ ಬಿಬಿಎಂಪಿ ಮೇಯರ್ ಹಾಗೂ ಆಯುಕ್ತರು ಹದಿನೈದು ದಿನದಲ್ಲಿ ಕೊರೊನಾ ಸೋಂಕಿತರು ಗುಣಮುಖನಾಗಬಹುದು. ಗುಣಮುಖವಾಗಿ ಹೊರಗೆ ಬಂದ್ರೆ ಬೇರೆಯವರಿಗೆ ಹರಡುವುದಿಲ್ಲ. ಹೀಗಾಗಿ 15 ದಿನಕ್ಕೆ ಲಾಕ್ಡೌನ್ ವಿಸ್ತರಿಸಬೇಕೆಂದು ತಿಳಿಸಿದ್ದಾರೆ.
ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ಮಾತನಾಡಿ, ಕೊರೊನಾ ಚೈನ್ ಲಿಂಕ್ ಬ್ರೇಕ್ ಮಾಡಲು ಹದಿನೈದು ದಿನ ಬೇಕು. 15 ದಿನದ ಸೈಕಲ್ ಮುಗಿಸಬೇಕು. ಹೀಗಾಗಿ ಸಿಎಂಗೆ ಮನವಿ ಮಾಡಿದ್ದೇವೆ. ಇಂದಿನ ಸಭೆಯಲ್ಲಿ ತೀರ್ಮಾನ ಆಗಲಿದೆ. ಕನಿಷ್ಠ 15 ದಿನ ಲಾಕ್ಡೌನ್ ಬೇಕು ಎಂಬುದು ವೈಯಕ್ತಿಕ ಅಭಿಪ್ರಾಯ ಎಂದು ಆಯುಕ್ತರು ತಿಳಿಸಿದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮೇಯರ್ ಗೌತಮ್ ಕುಮಾರ್, ಲಾಕ್ಡೌನ್ ಆದ್ರೂ ಜನ ಹೊರಗೆ ಬರ್ತಿದ್ದಾರೆ, ಜನರಿಗೆ ಅರಿವು ಬರುತ್ತಿಲ್ಲ. ನಗರದಲ್ಲಿ ಹದಿನೈದು ದಿನದ ಸೀರಿಯಸ್ ಲಾಕ್ಡೌನ್ ಮಾಡುವುದು ಒಳ್ಳೆಯದು ಎಂದು ಹೇಳಿದರು.