ಬೆಂಗಳೂರಲ್ಲಿ ಮೇ 1 - 24 ರವರೆಗೆ 144 ಸೆಕ್ಷನ್ ಜಾರಿ: ನಗರ ಪೊಲೀಸ್ ಆಯುಕ್ತರಿಂದ ಆದೇಶ - ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ
ರಾಜ್ಯಾದ್ಯಂತ ಲಾಕ್ಡೌನ್ ಘೋಷಿಸಿದ ಹಿನ್ನೆಲೆ ಮೇ.10 ರಿಂದ ಮೇ.24ರವರೆಗೆ ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮಾಹಿತಿ ನೀಡಿದ್ದಾರೆ.
![ಬೆಂಗಳೂರಲ್ಲಿ ಮೇ 1 - 24 ರವರೆಗೆ 144 ಸೆಕ್ಷನ್ ಜಾರಿ: ನಗರ ಪೊಲೀಸ್ ಆಯುಕ್ತರಿಂದ ಆದೇಶ ನಗರ ಪೊಲೀಸ್ ಆಯುಕ್ತ](https://etvbharatimages.akamaized.net/etvbharat/prod-images/768-512-11691954-thumbnail-3x2-kml.jpg)
ನಗರ ಪೊಲೀಸ್ ಆಯುಕ್ತ
ಬೆಂಗಳೂರು:ಕೊರೊನಾಗೆ ಕಡಿವಾಣ ಹಾಕಲು ರಾಜ್ಯದಾದ್ಯಂತ ಮೇ 10 ರಿಂದ ಮೇ 24 ರ ಬೆಳಿಗ್ಗೆ ವರೆಗೆ ಲಾಕ್ಡೌನ್ ಜಾರಿಗೊಳಿಸಿದ್ದು, ಈ ಅವಧಿಯಲ್ಲಿ ಬೆಂಗಳೂರಲ್ಲಿ 144 ಸೆಕ್ಷನ್ ಅಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.