ಕರ್ನಾಟಕ

karnataka

ETV Bharat / city

ಫೆ.17 ರಿಂದ ಜಂಟಿ ಅಧಿವೇಶನ: ವಿಧಾನಸೌಧ ಸುತ್ತಮುತ್ತ ನಿಷೇಧಾಜ್ಞೆ ಜಾರಿ

ಇದೇ ತಿಂಗಳು ಫೆ.17 ರಿಂದ ನಾಲ್ಕು ದಿನಗಳ‌ ಕಾಲ‌ ನಡೆಯುವ ವಿಧಾನಮಂಡಲ ಜಂಟಿ ಅಧಿವೇಶನ ಹಿನ್ನೆಲೆಯಲ್ಲಿ‌ ವಿಧಾನಸೌಧದ ಸುತ್ತಮುತ್ತಲೂ‌ ನಿಷೇಧಾಜ್ಞೆ ಜಾರಿ ಮಾಡಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆದೇಶ ಹೊರಡಿಸಿದ್ದಾರೆ.

144 Section Enforcement
ಭಾಸ್ಕರ್ ರಾವ್

By

Published : Feb 14, 2020, 5:28 PM IST

ಬೆಂಗಳೂರು: ಇದೇ ತಿಂಗಳು ಫೆ.17 ರಿಂದ ನಾಲ್ಕು ದಿನಗಳ‌ ಕಾಲ‌ ನಡೆಯುವ ವಿಧಾನಸಭಾ ಜಂಟಿ ಅಧಿವೇಶನ ಹಿನ್ನೆಲೆಯಲ್ಲಿ‌ ವಿಧಾನಸೌಧದ ಸುತ್ತಮುತ್ತಲೂ‌ ನಿಷೇಧಾಜ್ಞೆ ಜಾರಿ ಮಾಡಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆದೇಶ ಹೊರಡಿಸಿದ್ದಾರೆ.

ಜಂಟಿ ಅಧಿವೇಶನ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು, ಸಂಘ-ಸಂಸ್ಥೆಗಳ ಕಾರ್ಯಕರ್ತರು ಪ್ರತಿಭಟನೆ, ಧರಣಿ, ವಿಧಾನಸೌಧ ಮುತ್ತಿಗೆ, ಸತ್ಯಾಗ್ರಹ, ಮೆರವಣಿಗೆ ನಡೆಸುವ ಸಾಧ್ಯತೆಯಿದ್ದು ‌ಈ ವೇಳೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವ ಸಂಭವವಿದೆ. ಹೀಗಾಗಿ ಫೆ.17 ರ ಬೆಳಿಗ್ಗೆ 6 ಗಂಟೆಯಿಂದ 20 ರ ಮಧ್ಯರಾತ್ರಿ 12 ಗಂಟೆವರೆಗೆ ವಿಧಾನಸೌಧದ 2 ಕಿ.ಮೀ ಸುತ್ತಮುತ್ತಲು ನಿಷೇಧಾಜ್ಞೆ ವಿಧಿಸಲಾಗಿದೆ. ಈ ವೇಳೆ 5ಕ್ಕಿಂತ ಹೆಚ್ಚು ಜನ‌ ಸೇರುವುದು, ಮೆರವಣಿಗೆ ಅಥವಾ ಸಭೆ‌ ನಡೆಸುವುದು ಹಾಗೂ ಪಟಾಕಿ ಸಿಡಿಸುವುದು ಮಾಡುವಂತಿಲ್ಲ. ಒಂದು ವೇಳೆ‌ ನಿಯಮ‌ ಉಲ್ಲಂಘಿಸಿರುವುದು ಕಂಡುಬಂದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

...view details