ಬೆಂಗಳೂರು: ರಾಜ್ಯದಲ್ಲಿಂದು 1,432 ಮಂದಿಯಲ್ಲಿ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ ಮತ್ತು 27 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ಮೂಲಕ ಕೋವಿಡ್ ಸೋಂಕಿತರ ಒಟ್ಟು ಸಂಖ್ಯೆ 29,34,624ಕ್ಕೆ ಏರಿಕೆಯಾದ್ರೆ, ಮೃತಪಟ್ಟವರ ಸಂಖ್ಯೆ 37,088ಕ್ಕೆ ತಲುಪಿದೆ.
ರಾಜ್ಯದಲ್ಲಿಂದು 1,432 ಕೋವಿಡ್ ಸೋಂಕಿತರು ಪತ್ತೆ - 27 ಮಂದಿ ಸಾವು ! - ಬೆಂಗಳೂರು ಕೋವಿಡ್ ಅಪ್ಡೇಟ್ಸ್
ರಾಜ್ಯದಲ್ಲಿಂದು 1,432 ಕೋವಿಡ್ ಸೋಂಕಿತರು ಪತ್ತೆಯಾಗಿದ್ದು, 27 ಮಂದಿ ಸಾವನ್ನಪ್ಪಿದ್ದಾರೆ.
![ರಾಜ್ಯದಲ್ಲಿಂದು 1,432 ಕೋವಿಡ್ ಸೋಂಕಿತರು ಪತ್ತೆ - 27 ಮಂದಿ ಸಾವು ! state covid updates](https://etvbharatimages.akamaized.net/etvbharat/prod-images/768-512-12821967-thumbnail-3x2-xgcaaaaaaabrdgfb.jpg)
ಕೋವಿಡ್ ಅಪ್ಡೇಟ್ಸ್
ಇಂದು 1,538 ಮಂದಿ ಗುಣಮುಖರಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 21,133ರಷ್ಟಿದೆ. ಈವರೆಗೆ ಒಟ್ಟು 28,76,377 ಮಂದಿ ಬಿಡುಗಡೆಯಾಗಿದ್ದಾರೆ. ಬೆಂಗಳೂರಿನಲ್ಲಿ 318 ಮಂದಿಗೆ ಪಾಸಿಟಿವ್ ವರದಿ ಬಂದಿದ್ದು, ಇಬ್ಬರು ಮೃತಪಟ್ಟಿದ್ದಾರೆ. 7,942 ಸಕ್ರಿಯ ಪ್ರಕರಣಗಳಿವೆ. ಇನ್ನೂ ರಾಜ್ಯದಲ್ಲಿ ಮೃತಪಡುತ್ತಿರುವವರ ಪ್ರಮಾಣ ಶೇ 1.88 ರಷ್ಟಿದ್ದು, ಸೋಂಕಿತರ ಪ್ರಮಾಣ ಶೇ 0.80 ರಷ್ಟಿದೆ.
Last Updated : Aug 19, 2021, 8:14 PM IST