ಬೆಂಗಳೂರು: ರಾಜ್ಯದಲ್ಲಿ 1,57,509 ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ 1,350 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಮೂಲಕ 29,37,427ಕ್ಕೆ ಏರಿದ್ದು, ಕೊರೊನಾ ಪಾಸಿಟಿವಿಟಿ ದರ ಶೇ 0.85 ರಷ್ಟಾಗಿದೆ.
1,648 ಸೋಂಕಿತರು ಗುಣಮುಖರಾಗಿದ್ದು, ಈವರೆಗೆ 28,79,433 ಸೋಂಕಿನಿಂದ ಚೇತರಿಕೆ ಕಂಡಿದ್ದಾರೆ. ಈ ಮುಖೇನ ಸಕ್ರಿಯ ಪ್ರಕರಣಗಳ ಸಂಖ್ಯೆ 20,845 ರಷ್ಟಾಗಿದೆ.
ಇನ್ನೂ 18 ಸೋಂಕಿತರು ಸಾವನ್ನಪ್ಪಿದ್ದು, ಮೃತರ ಸಂಖ್ಯೆ 37,123ಕ್ಕೆ ತಲುಪಿದೆ. ಸಾವಿನ ಪ್ರಮಾಣ ಶೇ 1.33 ರಷ್ಟಿದೆ. ವಿಮಾನ ನಿಲ್ದಾಣದಲ್ಲಿ 1,730 ಪ್ರಯಾಣಿಕರು ತಪಾಸಣೆಗೊಳಪಟ್ಟಿದ್ದಾರೆ. ಯುಕೆಯಿಂದ 333 ಅಂತಾರಾಷ್ಟ್ರೀಯ ಪ್ರಯಾಣಿಕರು ಆಗಮಿಸಿದ್ದಾರೆ.
ರೂಪಾಂತರಿ ವೈರಸ್ ಅಪಡೇಟ್ಸ್:
- ಡೆಲ್ಟಾ ( Delta/B.617.2) -1089
- ಅಲ್ಪಾ(Alpha/B.1.1.7) - 155
- ಕಪ್ಪಾ (Kappa/B.1.617) 159.
- ಬೇಟಾ ವೈರಸ್ (BETA/B.1.351) -7
- ಡೆಲ್ಟಾ ಪ್ಲಸ್(Delta plus/B.1.617.2.1(AY.1) -4
- ಈಟಾ (ETA/B.1.525) - 1