ಕರ್ನಾಟಕ

karnataka

ETV Bharat / city

ಬೆಂಗಳೂರಿನಲ್ಲಿ 12 ಮಂದಿಗೆ ಕೊರೊನಾ, ಉತ್ತರಕನ್ನಡದ ಹಸುಳೆಗಳಿಗೂ ಮಹಾಮಾರಿ.. - corona cases

ರಾಜ್ಯದಲ್ಲಿ ಕೊರೊನಾ ಮಹಾಮಾರಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೆಂಗಳೂರು, ಉತ್ತರ ಕನ್ನಡ ಸೇರಿ ಹಲವಾರು ಜಿಲ್ಲೆಗಳಲ್ಲಿ ತನ್ನದೇ ಆಟಾಟೋಪ ಮುಂದುವರೆಸಿದೆ.

corona
ಕೊರೊನಾ

By

Published : May 9, 2020, 1:20 PM IST

ಬೆಂಗಳೂರು :ರಾಜ್ಯದಲ್ಲಿಂದು 36 ಕೊರೊನಾ ಸೋಂಕಿತರು ಹೊಸದಾಗಿ ಪತ್ತೆಯಾಗಿದ್ದಾರೆ. ಈ ಪೈಕಿ 12 ಮಂದಿ ಸೋಂಕಿತರು ಬೆಂಗಳೂರಿನಲ್ಲಿ ಕಂಡು ಬಂದಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 789ಕ್ಕೆ‌ ಏರಿಕೆಯಾಗಿದೆ.

ಕೊರೊನಾ ಪಟ್ಟಿ

ಉತ್ತರಕನ್ನಡದ ಭಟ್ಕಳದಲ್ಲಿ 2 ವರ್ಷ 6 ತಿಂಗಳ ಹೆಣ್ಣು ಮಗುವಿಗೆ ಹಾಗೂ 1 ವರ್ಷ 5 ತಿಂಗಳ ಗಂಡು ಮಗುವಿನಲ್ಲೂ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಇಬ್ಬರೂ ಮಕ್ಕಳಿಗೆ ರೋಗಿ ಸಂಖ್ಯೆ 659ರಿಂದ ಸೋಂಕು ಹರಡಿದೆ.

ಕೊರೊನಾ ಪಟ್ಟಿ

ಉತ್ತರ ಕನ್ನಡ 7, ಚಿತ್ರದುರ್ಗ 3, ದಕ್ಷಿಣ ಕನ್ನಡ, ಬೀದರ್​​ನಲ್ಲಿ ತಲಾ ಮೂರು, ದಾವಣಗೆರೆಯಲ್ಲಿ 6 ಹಾಗೂ ತುಮಕೂರು, ವಿಜಯಪುರದಲ್ಲಿ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಇದರಿಂದ ರಾಜ್ಯದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಒಟ್ಟು ಸೋಂಕಿತರ ಸಂಖ್ಯೆ 379ಕ್ಕೆ ಏರಿಕೆಯಾಗಿದೆ. ಜತೆಗೆ ಈವರೆಗೆ ಅಷ್ಟೇ ಸಂಖ್ಯೆಯ ಅಂದ್ರೆ 379 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ABOUT THE AUTHOR

...view details