ಕರ್ನಾಟಕ

karnataka

ETV Bharat / city

ಉಕ್ರೇನ್​ನಿಂದ 11 ಕನ್ನಡಿಗರ ರಕ್ಷಣೆ.. ಇಂದು ಮಧ್ಯಾಹ್ನವೇ ಬೆಂಗಳೂರಿಗೆ ಆಗಮನ - ಉಕ್ರೇನ್​ನಿಂದ ಭಾರತೀಯರು ವಾಪಸ್

ಯುದ್ಧ ಪೀಡಿತ ಉಕ್ರೇನ್​ನಲ್ಲಿ ಸಿಲುಕಿದ್ದ 11 ಕನ್ನಡಿಗರು ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್ ಆಗಿದ್ದಾರೆ.

ಉಕ್ರೇನ್​ನಿಂದ 11 ಕನ್ನಡಿಗರ ರಕ್ಷಣೆ
ಉಕ್ರೇನ್​ನಿಂದ 11 ಕನ್ನಡಿಗರ ರಕ್ಷಣೆ

By

Published : Mar 3, 2022, 10:48 AM IST

ಬೆಂಗಳೂರ/ಬೆಳಗಾವಿ/ಹಾವೇರಿ: ಯುದ್ಧಪೀಡಿತ ಉಕ್ರೇನ್‌ನಿಂದ ಇಂದು ಮೂರು ವಿಮಾನಗಳಲ್ಲಿ 628 ಭಾರತೀಯರು ಸುರಕ್ಷಿತವಾಗಿ ತಾಯ್ನಾಡಿಗೆ ಆಗಮಿಸಿದ್ದಾರೆ. ಇದರಲ್ಲಿ 11 ಕನ್ನಡಿಗ ವಿದ್ಯಾರ್ಥಿಗಳಿದ್ದಾರೆ. ಉಕ್ರೇನ್‌ ಗಡಿ ರೊಮೇನಿಯಾದ ಬುಚರೆಸ್ಟ್‌ನಿಂದ ಎರಡು ಪ್ರತ್ಯೇಕ ವಿಮಾನಗಳಲ್ಲಿ ದೆಹಲಿಗೆ ಆಗಮಿಸಿದ ಭಾರತೀಯರಲ್ಲಿ 11 ಕನ್ನಡಿಗರು ಇದ್ದು, ಇಂದು ಬೆಂಗಳೂರಿಗೆ ಆಗಮಿಸುವ ಸಾಧ್ಯತೆ ಇದೆ.

ಉಕ್ರೇನ್​ನಿಂದ ತಾಯ್ನಾಡಿಗೆ ಆಗಮನ

ಬೆಳಗಾವಿ ಜಿಲ್ಲೆ ಹಾಗೂ ಹಾವೇರಿ ಜಿಲ್ಲೆಯ ತಲಾ ಇಬ್ಬರು ವಿದ್ಯಾರ್ಥಿಗಳು ಸೇರಿ 11 ಕನ್ನಡಿಗರು ಸುರಕ್ಷಿತವಾಗಿ ಆಗಮಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಶ್ರೇಯಸ್ ಪಾಟೀಲ್, ಸೂರಜ್ ಭಾಗಜೆ ಹಾಗೂ ಹಾವೇರಿ ಜಿಲ್ಲೆಯ ಶಿವಾನಿ ಮಡಿವಾಳರ, ರಂಜಿತಾ ಕಲಕಟ್ಟಿ ಸದ್ಯ ದೆಹಲಿಯ ಕರ್ನಾಟಕ ಭವನದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ಎಂಬಿಬಿಎಸ್ ಓದಲು ಹೋಗಿ ಖಾರ್ಕೀವ್​ನಲ್ಲಿ ಸಿಲುಕಿದ್ದ ಶಿವಾನಿ ಹಾಗೂ ರಂಜಿತಾ ಸಿಲುಕಿಕೊಂಡಿದ್ದರು ಎಂದು ಅವರ ಪೋಷಕರು ಮಾಹಿತಿ ನೀಡಿದ್ದಾರೆ. ಉಕ್ರೇನ್ ಮೇಲೆ ರಷ್ಯಾ ದಾಳಿ ಮುಂದುವರಿದಿದ್ದು, ಪರಿಸ್ಥಿತಿ ಮತ್ತಷ್ಟು ಭೀಕರವಾಗುತ್ತಿದೆ.

ಉಕ್ರೇನ್​ನಿಂದ ತಾಯ್ನಾಡಿಗೆ ಆಗಮನ

(ಇದನ್ನೂ ಓದಿ: ಖೆರ್ಸನ್ ನಗರ ವಶಪಡಿಸಿಕೊಂಡ ರಷ್ಯಾ ಸೇನೆ: ಹೋರಾಟ ಮುಂದುವರೆದಿದೆ ಎಂದು ಉಕ್ರೇನ್​ ಅಧ್ಯಕ್ಷ!)

ABOUT THE AUTHOR

...view details