ಕರ್ನಾಟಕ

karnataka

By

Published : Nov 22, 2021, 11:14 AM IST

ETV Bharat / city

ಗುದನಾಳದಲ್ಲಿ ಮರೆಮಾಚಿ ಚಿನ್ನಸಾಗಾಟ: 10 ಮಂದಿ ಬಂಧನ, 1.52 ಕೋಟಿ ಮೌಲ್ಯದ ಬಂಗಾರ ವಶ

ಪೆಸ್ಟ್​​ ರೂಪದಲ್ಲಿ ಚಿನ್ನವನ್ನು ಗುದನಾಳದಲ್ಲಿ ಇಟ್ಟು ಅಕ್ರಮವಾಗಿ ಸಾಗಣೆ (gold smuggling) ಮಾಡುತ್ತಿದ್ದ 10 ಜನ ಪ್ರಯಾಣಿಕರನ್ನು ಬೆಂಗಳೂರು ಕಸ್ಟಮ್ಸ್​ ಅಧಿಕಾರಿಗಳು ವಶಕ್ಕೆ ಪಡೆದಿದ್ದು, 1.52 ಕೋಟಿ ರೂ. ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

10-passengers-arrested-for-smuggling-gold
ಚಿನ್ನಸಾಗಾಟ

ದೇವನಹಳ್ಳಿ: ಗುದನಾಳದಲ್ಲಿಟ್ಟು 1.52 ಕೋಟಿ ಮೌಲ್ಯದ ಚಿನ್ನವನ್ನ ಅಕ್ರಮವಾಗಿ ಸಾಗಣೆ (gold smuggling) ಮಾಡುತ್ತಿದ್ದ 10 ಜನ ಪ್ರಯಾಣಿಕರನ್ನ ವಶಕ್ಕೆ ಪಡೆದ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಚಿನ್ನವನ್ನ ವಶಕ್ಕೆ ಪಡೆದಿದ್ದಾರೆ.

ಗುದನಾಳದಲ್ಲಿ ಮರೆಮಾಚಿ ಚಿನ್ನಸಾಗಾಟ

ನವೆಂಬರ್ 20 ರಂದು ಕೊಲಂಬೊದಿಂದ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕರನ್ನು ತಪಾಸಣೆ ಮಾಡಲಾಗುತ್ತಿತ್ತು. ಆಗ 10 ಪ್ರಯಾಣಿಕರು ತಮ್ಮ ಗುದನಾಳದಲ್ಲಿ ಪೆಸ್ಟ್ ರೂಪದಲ್ಲಿ ಚಿನ್ನವನ್ನ ಮರೆಮಾಚಿ ಕಳ್ಳಸಾಗಣೆ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳಿಂದ 3066.55 ಗ್ರಾಂ ತೂಕದ 1,51, 79, 412 ರೂ. ಮೌಲ್ಯದ ಚಿನ್ನವನ್ನ ಜಪ್ತಿ ಪಡೆಯಲಾಗಿದ್ದು, ವಿಚಾರಣೆ ಮುಂದುವರೆದಿದೆ.

ABOUT THE AUTHOR

...view details