ದೊಡ್ಡಬಳ್ಳಾಪುರ:ಮನೆಗೆ ಬೀಗ ಹಾಕಿ ದುಬೈನಲ್ಲಿದ್ದ ಮಗಳ ಮನೆಗೆ ಹೋಗಿದ್ದ ಸಮಯದಲ್ಲಿ ಮನೆಯ ಬಾಗಿಲು ಒಡೆದು ಒಳನುಗ್ಗಿದ ಕಳ್ಳರು ಒಂದೂವರೆ ಕೆಜಿ ಚಿನ್ನ 3 ಲಕ್ಷ ನಗದು ದೋಚಿದ್ದಾರೆ.
ನಗರದ ಖಾಸ್ ಬಾಗಿಲು ಬಳಿ ಪದ್ಮ ರೆಡ್ಡಿ ಎಂಬುವರ ಮನೆಯಲ್ಲಿ ಕಳ್ಳತನ ಪ್ರಕರಣ ನಡೆದಿದೆ. ಪದ್ಮ ರೆಡ್ಡಿ ಕುಟುಂಬಸಮೇತರಾಗಿ ನಾಲ್ಕು ತಿಂಗಳ ಹಿಂದೆ ದುಬೈಯಲ್ಲಿದ್ದ ಮಗಳ ಮನೆಗೆ ತೆರಳಿದ್ದರು. ಆದರೆ ಈ ವೇಳೆ ಸುತ್ತಮುತ್ತಲಿನ ಮನೆಯವರಿಗೂ ತಿಳಿಸದೇ ಹೋಗಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿರುವ ಕಳ್ಳರು ಮನೆ ಬಾಗಿಲು ಒಡೆದು ಅಪಾರ ಪ್ರಮಾಣದ ನಗ-ನಾಣ್ಯ ಹೊತ್ತೊಯ್ದಿದ್ದಾರೆ.