ಕರ್ನಾಟಕ

karnataka

ETV Bharat / city

ಕುವೈತ್ ದೊರೆ ನಿಧನ: ಗೌರವಾರ್ಥ ಇಂದು ರಾಜ್ಯದಲ್ಲಿ ಒಂದು ದಿನದ ಶೋಕಾಚರಣೆ - ಕುವೈತ್​ ದೊರೆಗಾಗಿ ಕರ್ನಾಟಕದಲ್ಲಿ ಶೋಕಾಚರಣೆ

ಕುವೈತ್ ದೊರೆ ನಿಧನರಾದ ಹಿನ್ನೆಲೆ ಇಂದು ದೇಶಾದ್ಯಂತ ಒಂದು ದಿನ ಶೋಕಾಚಾರನೆ ಆಚರಿಸಲಾಗುತ್ತಿದೆ. ಇಂದು ಯಾವುದೇ ಅಧಿಕೃತ ಮನರಂಜನಾ ಕಾರ್ಯಕ್ರಮಗಳು ಇರುವುದಿಲ್ಲ.

Kuwait administrator
ಕುವೈತ್ ದೊರೆ

By

Published : Oct 4, 2020, 12:28 AM IST

ಬೆಂಗಳೂರು: ಕುವೈತ್ ದೊರೆ ಶೇಖ್ ಸಬಾಹ್ ಅಲ್ ಅಹಮದ್ ಅಲ್ ಜಬೀರ್ ಅಲ್ ಸಬಾಹ್ ಅಮೀರ್ ನಿಧನದ ಹಿನ್ನೆಲೆಯಲ್ಲಿ ಅ.4ರಂದು ಕರ್ನಾಟಕದಲ್ಲಿ ಒಂದು ದಿನದ ಶೋಕಾಚರಣೆ ಆಚರಿಸಲು ಸರ್ಕಾರ ಆದೇಶ ಹೊರಡಿಸಿದೆ.

ಕುವೈತ್ ದೊರೆ ಸೆ.29ರಂದು ನಿಧನ ಹೊಂದಿದ್ದರು. ಅಗಲಿದ ಗಣ್ಯರ ಗೌರವಾರ್ಥವಾಗಿ ಇಂದು ಒಂದು ದಿನ ದೇಶದಾದ್ಯಂತ ಶೋಕಾಚರಣೆ ಆಚರಿಸಲು ಭಾರತ ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಒಂದು ದಿನದ ಶೋಕಾಚರಣೆಯನ್ನು ಆಚರಿಸಲು ನಿರ್ಧರಿಸಲಾಗಿದೆ.

ಕುವೈತ್ ದೊರೆ ನಿಧನ: ಗೌರವಾರ್ಥ ಇಂದು ರಾಜ್ಯದಲ್ಲಿ ಒಂದು ದಿನದ ಶೋಕಾಚರಣೆ

ಇಂದು ಯಾವುದೇ ಅಧಿಕೃತ ಮನರಂಜನಾ ಕಾರ್ಯಕ್ರಮಗಳು ಇರುವುದಿಲ್ಲ ಹಾಗೂ ನಿಯಮಿತವಾಗಿ ರಾಷ್ಟ್ರಧ್ವಜವನ್ನು ಹಾರಿಸಲ್ಪಡುವ ಸರ್ಕಾರದ ಎಲ್ಲಾ ಕಟ್ಟಡಗಳ ಮೇಲೆ ಧ್ವಜವನ್ನು ಅರ್ಧ ಮಟ್ಟದಲ್ಲಿ ಹಾರಿಸಲು ಸೂಚಿಸಲಾಗಿದೆ.

ABOUT THE AUTHOR

...view details