ಕರ್ನಾಟಕ

karnataka

ETV Bharat / city

ವಿಜಯನಗರದಲ್ಲಿ ಚಿರತೆ ದಾಳಿ, ಬಳ್ಳಾರಿಯಲ್ಲಿ ಸಿಡಿಲು ಬಡಿದು ಯುವಕ ಸಾವು - youth died by hitting thunder light

ಬಳ್ಳಾರಿಯಲ್ಲಿ ಸಿಡಿಲು ಬಡಿದು ಯುವಕನೊಬ್ಬ ಮೃತಪಟ್ಟಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಂಡೂರಿನ ನಂದಿಹಳ್ಳಿ ಗ್ರಾಮದಲ್ಲಿ ನಡೆದಿದೆ. ವಿಜಯಪುರದ ಕೊಟ್ಟೂರು ತಾಲೂಕಿನ ಸುಂಕದ ಕಲ್ಲು ಅರಣ್ಯ ಪ್ರದೇಶದ ಅಂಚಿನಲ್ಲಿ ಇಬ್ಬರ ಮೇಲೆ ಚಿರತೆ ದಾಳಿ ನಡೆಸಿದೆ. ಸದ್ಯ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

youth-died-by-hitting-thunderbolt-leopard-attack-two-was-injured
ವಿಜಯನಗರದಲ್ಲಿ ಚಿರತೆ ದಾಳಿ, ಬಳ್ಳಾರಿಯಲ್ಲಿ ಸಿಡಿಲು ಬಡಿದು ಯುವಕ ಸಾವು

By

Published : Apr 26, 2022, 12:18 PM IST

ಬಳ್ಳಾರಿ: ಯುವಕನೊಬ್ಬ ಸಿಡಿಲಿಗೆ ಬಲಿಯಾದ ದಾರುಣ ಘಟನೆ ಸಂಡೂರು ಪುರಸಭೆ ವ್ಯಾಪ್ತಿಯ ನಂದಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ಯುವಕನನ್ನು ಮಂಜುನಾಥ್ (23) ಎಂದು ಗುರುತಿಸಲಾಗಿದೆ. ನಿನ್ನೆ ಸುರಿದ ಗುಡುಗು ಸಹಿತ ಮಳೆಯ ಸಂದರ್ಭ ಮೃತ ಯುವಕನ ಮನೆಯ ಮುಂದಿನ ಮರಕ್ಕೆ ಬಡಿದ ಸಿಡಿಲು ಬಳಿಕ ಯುವಕನಿಗೆ ಅಪ್ಪಳಿಸಿದ್ದು, ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಸ್ಥಳಕ್ಕೆ ಸಂಡೂರು ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯನಗರ: ಜಿಲ್ಲೆಯ ಕೊಟ್ಟೂರು ತಾಲೂಕಿನ ಸುಂಕದಕಲ್ಲು ಅರಣ್ಯ ಪ್ರದೇಶದ ಅಂಚಿನಲ್ಲಿ ಇಬ್ಬರ ಮೇಲೆ ಚಿರತೆ ದಾಳಿ ನಡೆಸಿದೆ. ಬಸಮ್ಮ ಮತ್ತು ದುರ್ಗೇಶ ಎಂಬುವರ ಮೇಲೆ ಚಿರತೆ ದಾಳಿ ನಡೆಸಿದ್ದು, ಇಬ್ಬರಿಗೂ ಗಂಭೀರ ಗಾಯಗಳಾಗಿದ್ದು, ಜಗಳೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ತಾಳೆ ಗರಿ ಸಂಗ್ರಹಿಸಿ ಪೊರಕೆ ಮಾಡಿ ಮಾರಾಟ ಮಾಡುವುದನ್ನು ಉದ್ಯೋಗವಾಗಿಸಿಕೊಂಡಿದ್ದ ಉಜ್ಜೈನಿ ಗ್ರಾಮದ ವೃದ್ಧೆ ಬಸಮ್ಮ ನಿನ್ನೆ ರಾತ್ರಿ ಸುಂಕದಕಲ್ಲು ಅರಣ್ಯದಲ್ಲಿ ಕುಟುಂಬದೊಂದಿಗೆ ತಂಗಿದ್ದರು. ಈ ವೇಳೆ, ಬಸಮ್ಮ ಅವರ ಮೇಲೆ ಚಿರತೆ ದಾಳಿ ನಡೆಸಿದೆ. ಇದಾದ ಬಳಿಕ ಕೆಲವೇ ನಿಮಿಷಗಳ ಅಂತರದಲ್ಲಿ ಕೂಗಳತೆ ದೂರದಲ್ಲಿ ಸುಂಕದಕಲ್ಲು ಗ್ರಾಮದ ಕುರಿಗಾಯಿ ದುರ್ಗೇಶ ಎಂಬವರ ಮೇಲೂ ಚಿರತೆ ದಾಳಿ ನಡೆಸಿರುವುದಾಗಿ ತಿಳಿದು ಬಂದಿದೆ.

ಚಿರತೆ ದಾಳಿಗೆ ಒಳಗಾದ ದುರ್ಗೇಶ

ಕಳೆದ ಎರಡು ವರ್ಷಗಳಿಂದ ತಗ್ಗಿದ್ದ ಚಿರತೆ ದಾಳಿ ಇದೀಗ ಮತ್ತೆ ಶುರುವಾಗಿರುವುದು ಗ್ರಾಮಸ್ಥರಲ್ಲಿ ಆತಂಕವನ್ನುಂಟು ಮಾಡಿದೆ. ಇನ್ನು ಚಿರತೆ ದಾಳಿಯಿಂದ ಸುಂಕದಕಲ್ಲು ಅರಣ್ಯದಂಚಿನ ಗ್ರಾಮಗಳ ಜನರು ಬೆಚ್ಚಿಬಿದ್ದಿದ್ದು, ಆದಷ್ಟು ಬೇಗ ಅರಣ್ಯ ಇಲಾಖೆ ಚಿರತೆಗಳನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ. ಸದ್ಯ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜೊತೆಗೆ ಅರಣ್ಯ ಇಲಾಖೆಯವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚಿರತೆ ದಾಳಿಗೆ ಒಳಗಾದ ವೃಧ್ಧೆ ಬಸಮ್ಮ

ಓದಿ :ಲವ್​ ಮ್ಯಾಟರ್​​ ಶಂಕೆ.. ಮದುವೆಗೆ ತೆರಳುತ್ತಿದ್ದ ತಂದೆ - ತಾಯಿ, ಮಗಳನ್ನು ಅಡ್ಡಗಟ್ಟಿ ಬರ್ಬರವಾಗಿ ಕೊಂದ ದುಷ್ಕರ್ಮಿಗಳು!

ABOUT THE AUTHOR

...view details