ಕರ್ನಾಟಕ

karnataka

ETV Bharat / city

ಮೂರು ದಿನಗಳಿಂದ ಕಾಣದ ಯುವಕ ಶವವಾಗಿ ಪತ್ತೆ... - undefined

ಮದುವೆಗೆಂದು ಹೋದ ಯುವಕ ಶವವಾಗಿ ಪತ್ತೆಯಾಗಿರುವ ಘಟನೆ ಕೂಡ್ಲಿಗಿಯಲ್ಲಿ ನಡೆದಿದೆ. ಸದ್ಯ ಯುವಕನ ಸಾವಿನ ಸುತ್ತ ಅನುಮಾನದವೆದ್ದಿದ್ದು , ಯುವಕನ ತಾಯಿ ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಆರೋಪಿಸಿದ್ದಾರೆ.

ಯುವಕ ಶವವಾಗಿ ಪತ್ತೆ

By

Published : Apr 13, 2019, 12:35 PM IST

ಬಳ್ಳಾರಿ‌ :ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ಯುವಕನ ಶವವು ಮನೆ ಮುಂದಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಕೂಡ್ಲಿಗಿಯಲ್ಲಿ ನಡೆದಿದೆ.

ಜಿಲ್ಲೆಯ ಕೂಡ್ಲಿಗಿಯ ಒಂದನೇ ವಾರ್ಡ್​ನ ಬಿಎಸ್ಎನ್ಎಲ್ ಕಚೇರಿಯ ನಿವಾಸಿ ಅಂಬರಿ (25) ಮೃತ ಯುವಕ. ಮೂರು ದಿನಗಳ ಹಿಂದೆ ಮದುವೆಗೆಂದು ಹೋದವನು, ತನ್ನ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದ. ಇಂದು ಮುಂಜಾನೆ ಬೆಳಗಿನ ಜಾವ ಮನೆಯ ಮುಂದೆ ದೊಡ್ಡ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಈತನ ಶವ ಪತ್ತೆಯಾಗಿದೆ.

ಯುವಕ ಶವವಾಗಿ ಪತ್ತೆ

ಇನ್ನು ಮಗ ನೇಣು ಹಾಕಿಕೊಂಡಿಲ್ಲ. ಯಾರೋ ಕೊಲೆ ಮಾಡಿದ್ದಾರೆ ಎಂದು ಮೃತ ಯುವಕನ ತಾಯಿ ಚಂದ್ರಮ್ಮ ದೂರಿದ್ದಾರೆ. ವಾಣಿ ಎಂಬ ವಿವಾಹಿತ ಮಹಿಳೆಯೊಂದಿಗೆ ಈತ ಅನೈತಿಕ ಸಂಬಂಧ ಹೊಂದಿದ್ದು, ಆಕೆಯ ಕಡೆಯವರು ಕೊಲೆ ಮಾಡಿ ಈ ರೀತಿ ಮರಕ್ಕೆ ನೇಣು ಹಾಕಿ ಹೋಗಿದ್ದಾರೆ ಎಂದು ತಾಯಿ ಚಂದ್ರಮ್ಮ ಆರೋಪಿಸಿದ್ದಾರೆ.

ಸದ್ಯ ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಬಳ್ಳಾರಿಗೆ ರವಾನಿಸಲಾಗಿದ್ದು, ಪೊಲೀಸರ ತನಿಖೆಯ ಬಳಿಕವಷ್ಟೇ ಸತ್ಯ ಹೊರಬೀಳಲಿದೆ.

For All Latest Updates

TAGGED:

ABOUT THE AUTHOR

...view details