ಹೊಸಪೇಟೆ: ಯೋಗ ವಿಜ್ಞಾನವಾಗಿದೆ. ಯೋಗ ಮಾಡುವುದರಿಂದ ಕಾಯಿಲೆಗಳು ದೂರ ಉಳಿಯುತ್ತವೆ ಜೊತೆಗೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಸುಲಭ ಮಾರ್ಗ ಎಂದು ಯೋಗ ಗುರು ಬಾಬಾ ರಾಮ್ದೇವ್ ತಿಳಿಸಿದರು.
ವಿಜ್ಞಾನದ ಮೌಲ್ಯಗಳನ್ನು ಯೋಗ ಒಳಗೊಂಡಿದೆ: ಬಾಬಾ ರಾಮ್ದೇವ್
ಯೋಗ ವಿಜ್ಞಾನವಾಗಿದೆ, ಯೋಗ ಮಾಡುವುದರಿಂದ ಕಾಯಿಲೆಗಳು ದೂರ ಉಳಿಯುತ್ತವೆ ಜೊತೆಗೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಸುಲಭ ಮಾರ್ಗ ಎಂದು ಯೋಗ ಗುರು ಬಾಬಾ ರಾಮ್ದೇವ್ ತಿಳಿಸಿದರು.
ಕನ್ನಡ ವಿವಿಯ ಮಂಟಪ ಸಭಾದಲ್ಲಿ ಇಂದು ಯೋಗ ಅಧ್ಯಯನ ಕೇಂದ್ರ ಮತ್ತು ಪತಂಜಲಿ ಯೋಗ ಸಮಿತಿ ಕರ್ನಾಟಕದ ವತಿಯಿಂದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕೀರ್ಣ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಮಾತನಾಡಿದ ರಾಮ್ದೇವ್, ವಿದ್ಯಾರ್ಥಿಗಳಿಗೆ ಯೋಗದ ಕುರಿತು ಮಾಹಿತಿ ನೀಡಿದರು. ಯೋಗ ಮಾಡುವುದರಿಂದ ಸ್ವಾವಲಂಬಿ ಜೀವನವನ್ನು ಕಟ್ಟಿಕೊಳ್ಳಬಹುದು. ಮನಸ್ಸು ಉಲ್ಲಾಸವಾಗುತ್ತದೆ. ಜೀವನದಲ್ಲಿ ತೇಜಸ್ಸು ಹೆಚ್ಚಾಗುತ್ತದೆ. ಆನಂದ, ಉತ್ಸಹ ಸಿಗುತ್ತದೆ. ನಾನು ಯೋಗಕ್ಕೆ ಜೀವನವನ್ನೇ ಮುಡುಪಾಗಿಟ್ಟಿದ್ದೇನೆ, ಭಾರತ ಜಗತ್ತಿಗೆ ಯೋಗವನ್ನು ಕೊಡುಗೆಯಾಗಿ ನೀಡಿದೆ ಎಂದರು.