ಕರ್ನಾಟಕ

karnataka

ETV Bharat / city

ಪ್ರತಿ ಮಗುವಿಗೂ ಬ್ಯಾಂಕ್​ ಖಾತೆ: ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಧಾರ - Child Labor Project

ಬಾಲ ಕಾರ್ಮಿಕ ಶಾಲಾ ಮಕ್ಕಳಿಗೆ ಡಿಬಿಟಿ ಮುಖಾಂತರ ಶಿಷ್ಯವೇತನವನ್ನು ನೇರವಾಗಿ ಅವರ ಖಾತೆಗೆ ಜಮಾ ಆಗುವಂತೆ ಪ್ರತಿಯೊಂದು ಮಗುವಿಗೆ ಬ್ಯಾಂಕ್ ಖಾತೆಯನ್ನು ತೆರೆಯಲು ಇಂದಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸೂಚಿಸಲಾಯಿತು.

Working Committee Meeting of the National Child Labor Project
ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆಯ ಕಾರ್ಯಕಾರಿ ಸಮಿತಿ ಸಭೆ

By

Published : Oct 13, 2020, 10:02 PM IST

ಬಳ್ಳಾರಿ :ಉದ್ದಿಮೆಗಳು ಸೇರಿದಂತೆ ವಿವಿಧೆಡೆ ಆಕಸ್ಮಿಕವಾಗಿ ದಾಳಿ ನಡೆಸಿದ ಸಂದರ್ಭದಲ್ಲಿ ಬಾಲಕಾರ್ಮಿಕರನ್ನು ರಕ್ಷಣೆ ಮಾಡುವುದರ ಜತೆಗೆ ಸಂಬಂಧಿಸಿದ ಮಾಲೀಕರ ಮೇಲೆ ತಕ್ಷಣ ಪ್ರಕರಣ ದಾಖಲಿಸಬೇಕು ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ವಿಡಿಯೋ ಕಾನ್ಪರೆನ್ಸ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆಯ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆಕಸ್ಮಿಕವಾಗಿ ದಾಳಿಯಲ್ಲಿ ಬಾಲ ಕಾರ್ಮಿಕರನ್ನು ಕೆಲಸದಿಂದ ಬಿಡುಗಡೆಗೊಳಿಸಿ ಅವರನ್ನು ಪುನರ್ವಸತಿಗೊಳಿಸಿದಾಗ ಮಕ್ಕಳ ದುಡಿಮೆ ಅವಲಂಬಿಸಿದ ಸಾಕಷ್ಟು ಕುಟುಂಬಗಳಿಗೆ ಜೀವನ ನಿರ್ವಹಣೆ ಮಾಡುವುದು ಕಷ್ಟಕರವಾಗುತ್ತದೆ. ಇದನ್ನು ಸಂಬಂಧಿಸಿದ ಅಧಿಕಾರಿಗಳು ಗಮನದಲ್ಲಿಟ್ಟುಕೊಂಡು ಬಾಲಕಾರ್ಮಿಕರ ಪೋಷಕರಿಗೆ ವಿವಿಧ ಅಭಿವೃದ್ಧಿ ನಿಗಮಗಳ ವತಿಯಿಂದ ಸಬ್ಸಿಡಿ ರೂಪದಲ್ಲಿ ಸಾಲಸೌಲಭ್ಯವನ್ನು ಒದಗಿಸುವುದರ ಮೂಲಕ ಅವರು ಅರ್ಥಿಕವಾಗಿ ಸಬಲರಾಗುವುದಕ್ಕೆ ಸಹಾಯ-ಸಹಕಾರ ನೀಡಬೇಕು ಎಂದರು.

ಜಿಲ್ಲೆಯಲ್ಲಿ ಈಗಾಗಲೇ 8 ಬಾಲಕಾರ್ಮಿಕ ವಿಶೇಷ ವಸತಿ ಕೇಂದ್ರಗಳ ಜೊತೆಗೆ ಇನ್ನೂ ಹೆಚ್ಚುವರಿಯಾಗಿ 16 ಬಾಲಕಾರ್ಮಿಕ ವಿಶೇಷ ತರಬೇತಿಗಳಿಗೆ ಮಂಜೂರಾಗಿದ್ದು, ವಸತಿ ಶಾಲೆಗೆ ಅವಶ್ಯಕತೆ ಇರುವ ಅನುದಾನವನ್ನು ಡಿಎಂಎಫ್ ಅಥವಾ ಸಿಎಸ್‍ಆರ್ ಪಡೆದುಕೊಂಡು ಬಲವರ್ಧನೆ ಮಾಡುವುದು ಅಗತ್ಯ ಎಂಬುದನ್ನು ಪ್ರಸ್ತಾಪಿಸಿದ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ ಅವರು ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ವಿವರವಾಗಿ ಚರ್ಚಿಸಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು.

ಬಾಲ ಕಾರ್ಮಿಕ ಶಾಲಾ ಮಕ್ಕಳಿಗೆ ಡಿಬಿಟಿ ಮುಖಾಂತರ ಶಿಷ್ಯವೇತನ ನೇರವಾಗಿ ಅವರ ಖಾತೆಗೆ ಜಮಾ ಆಗುವಂತೆ ಪ್ರತಿಯೊಂದು ಮಗುವಿಗೆ ಬ್ಯಾಂಕ್ ಖಾತೆ ತೆರೆಯಲು ಇದೇ ಸಂದರ್ಭದಲ್ಲಿ ಅವರು ಸೂಚಿಸಿದರು.

ಆಕಸ್ಮಿಕ ದಾಳಿಯಲ್ಲಿ ಕಂಡು ಬರುವ ಬಾಲ ಕಾರ್ಮಿಕರನ್ನು ರಕ್ಷಿಸಿ ದುಡಿಸಿಕೊಳ್ಳುತ್ತಿರುವ ಮಾಲೀಕರಿಂದ ಬಾಲ ಕಾರ್ಮಿಕ ಕಾಯ್ದೆ ಅನ್ವಯ ಪ್ರತಿ ಬಾಲ ಕಾರ್ಮಿಕರಿಗೆ 20 ಸಾವಿರ ರೂ.ಗಳನ್ನು ವಸೂಲಾತಿ ಪ್ರಕ್ರಿಯೆ ಜಾರಿಯಾಗಿರುವುದರಿಂದ ಇದುವರೆಗೂ 25 ಲಕ್ಷ ರೂ. ಹೆಚ್ಚು ಹಣ ಸಂಗ್ರಹವಾಗಿದೆ. ವಸೂಲಾದ ಅನುದಾನವನ್ನು ಮಕ್ಕಳಿಗೊಸ್ಕರ ಶೈಕ್ಷಣಿಕ ವೆಚ್ಚಕ್ಕಾಗಿ ಉಪಯೋಗಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ, ಕಾರ್ಮಿಕ ಅಧಿಕಾರಿ ಅಲ್ತಾಫ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶುಭಾ, ಬಾಲಕಾರ್ಮಿಕ ಯೋಜನಾ ನಿರ್ದೇಶಕ ಎ.ಮೌನೇಶ್, ಪಿಎಸ್‍ಐ ವೈ.ಎಸ್ ಹನುಮಂತಪ್ಪ, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ಭರತ್.ಬಿ ಸೇರಿದಂತೆ ಇತರ ಇಲಾಖೆಯ ಅಧಿಕಾರಿಗಳು ಇದ್ದರು.

ABOUT THE AUTHOR

...view details