ಹೊಸಪೇಟೆ: ನಗರದ ಉಪವಿಭಾಗ ಮಟ್ಟದ ಸಾರ್ವಜನಿಕ ಆಸ್ಪತ್ರೆಯ ಮುಂದೆ ರೋಜಾ ಎಂಬುವರು ಆಟೋದಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ.
ಮಳೆ ಗಾಳಿಗೆ ರಸ್ತೆಯಲ್ಲಿ ಉರುಳಿ ಬಿದ್ದ ಮರ... ಆಟೋದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ - hospet news
ಹೊಸಪೇಟೆಯ ಉಪವಿಭಾಗ ಮಟ್ಟದ ಸಾರ್ವಜನಿಕ ಆಸ್ಪತ್ರೆ ಮುಂದೆ ರೋಜಾ ಎಂಬುವರು ಆಟೋದಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಆಟೋದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ..!
ಹೊಸಪೇಟೆ ತಾಲೂಕಿನ ಕಡ್ಡಿರಾಂಪುರದ ರೋಜಾಗೆ ಬೆಳಗಿನ ಜಾವ ಹೆರಿಗೆ ನೋವು ಕಾಣಿಸಿಕೊಂಡ ಕಾರಣ, ಗ್ರಾಮದಿಂದ ತಾಲೂಕು ಆಸ್ಪತ್ರೆಗೆ ಆಟೋದಲ್ಲಿ ಕರೆದುಕೊಂಡು ಬರಲಾಗುತ್ತಿತ್ತು. ತಾಲೂಕು ಆಸ್ಪತ್ರೆಯ ಮುಂದೆ ಮಳೆಗಾಳಿಗೆ ಮರವೊಂದು ನೆಲಕ್ಕೆ ಉರುಳಿದ ಪರಿಣಾಮ, ಸಂಚಾರ ಸ್ಥಗಿತಗೊಂಡಿತ್ತು. ರೋಜಾ ಅವರಿಗೆ ಹೆರಿಗೆ ನೋವು ಹೆಚ್ಚಾಗಿ ಆಟೋದಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಸದ್ಯ, ತಾಲೂಕು ಆಸ್ಪತ್ರೆಯಲ್ಲಿ ತಾಯಿ ಮತ್ತು ಮಗು ಸುರಕ್ಷಿತವಾಗಿದ್ದು, ಚಿಕಿತ್ಸೆ ನೀಡಲಾಗಿದೆ ಎಂದು ವೈದ್ಯಾಧಿಕಾರಿ ಡಾ.ಸಲಿಂ ತಿಳಿಸಿದ್ದಾರೆ.
Last Updated : Oct 20, 2019, 2:29 PM IST