ಹೊಸಪೇಟೆ: ನಗರದ ಅನಂತಶಯನ ಗುಡಿಯ ಬಳಿ ಬೊಲೆರೋ ವಾಹನದಲ್ಲಿ ಮಹಿಳೆಯು ಹೆಣ್ಣು ಮಗುವಿಗೆ ಜನ್ಮ ನೀಡಿರುವ ಘಟನೆ ನಡೆದಿದೆ. ಹೊಸಪೇಟೆ ತಾಲೂಕಿನ ಅಂಜಲಿ ಬಾಯಿ ಮಗುವಿಗೆ ಜನ್ಮ ನೀಡಿದ ಮಹಿಳೆ.
ಬೊಲೆರೋ ವಾಹನದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ! - ಹೊಸಪೇಟೆ ಸುದ್ದಿ
ಆ್ಯಂಬುಲೆನ್ಸ್ ಬರೋದು ತಡವಾಗಿರೋ ಕಾರಣ ಬೊಲೆರೋ ವಾಹನದಲ್ಲಿ ಮಹಿಳೆಯನ್ನು ಆಸ್ಪತ್ರೆಗೆ ತರಲಾಗುತ್ತಿತ್ತು. ಸದ್ಯ ತಾಯಿ ಹಾಗೂ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
baby
ಹೆರಿಗೆಗಾಗಿ ಕಡ್ಡಿರಾಂಪುರದಿಂದ ಹೊಸಪೇಟೆಗೆ ಬರುವಾಗ ಮಾರ್ಗದಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ಆ್ಯಂಬುಲೆನ್ಸ್ ಬರುವುದು ತಡವಾಗಿದ್ದರಿಂದ ಬೊಲೆರೋ ವಾಹನದಲ್ಲಿ ಆಸ್ಪತ್ರೆಗೆ ಕರೆ ತರಲಾಗುತ್ತಿತ್ತು. ಆದರೆ ಮಾರ್ಗ ಮಧ್ಯೆಯೇ ಹೆರಿಗೆಯಾಗಿದೆ. ಈಗ ಉಪವಿಭಾಗ ಮಟ್ಟದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ತಾಯಿ ಹಾಗೂ ಮಗುವನ್ನು ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.