ಕರ್ನಾಟಕ

karnataka

ETV Bharat / city

'ಜಿಂದಾಲ್​ಗೆ ಭೂಮಿ ಮಾರಾಟ ಮಾಡಿದ್ರೇ, ಸುಮ್ನೇ ನೋಡ್ಕೊಂಡಿರೋಕಾಗುತ್ತೇನ್ರೀ..' - undefined

ಸರ್ಕಾರ ಲೀಜ್ ಆಫ್ ಅಗ್ರಿಮೆಂಟ್​ಗೆ ನೀಡಿದ ಭೂಮಿಯನ್ನು ಜಿಂದಾಲ್ ಕಂಪನಿಗೆ ಮಾರಾಟ ಮಾಡಿದರೆ ಸರ್ಕಾರದ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಕೆ.ಎರಿಸ್ವಾಮಿ ಎಚ್ಚರಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕೆ.ಎರಿಸ್ವಾಮಿ

By

Published : May 29, 2019, 10:44 AM IST

ಬಳ್ಳಾರಿ: ಜಿಂದಾಲ್ ಕಂಪನಿಗೆ ಸರ್ಕಾರ ಲೀಜ್ ಆಫ್ ಅಗ್ರಿಮೆಂಟ್​ಗೆ ನೀಡಿದ 3700 ಎಕರೆ ಭೂಮಿಯನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡಬಾರದು. ಮಾರಾಟ ಮಾಡಲು ಮುಂದಾದರೆ ಕರ್ನಾಟಕ ಜನಸೈನ್ಯ ಸಂಘಟನೆಯಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಸಂಘಟನೆ ರಾಜ್ಯಾಧ್ಯಕ್ಷ ಕೆ.ಎರಿಸ್ವಾಮಿ ಎಚ್ಚರಿಸಿದರು.

ನಗರದ ಖಾಸಗಿ ಹೋಟೆಲ್​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲು ಗ್ರಾಮದ ಜಿಂದಾಲ್ ಕಂಪನಿಗೆ ಸರ್ಕಾರ ಲೀಜ್ ಆಫ್ ಅಗ್ರಿಮೆಂಟ್ ಅಡಿಯಲ್ಲಿ ಜಮೀನಿಗಳನ್ನು ನೀಡಿತ್ತು. ಅದರಲ್ಲಿ ಬಳ್ಳಾರಿ, ಸಂಡೂರು, ಕುರೆಕೊಪ್ಪ ಗ್ರಾಮದ ರೈತರ ಭೂಮಿಗಳನ್ನು ಒಂದು ಎಕರೆಗೆ 1 ಲಕ್ಷದ 22 ಸಾವಿರದಂತೆ ನೀಡಿದೆ. ಈಗ ಸರ್ಕಾರ, ಲೀಜ್​ನ ಭೂಮಿಗಳನ್ನು ಜಿಂದಾಲ್​ಗೆ ಮಾರಾಟ ಮಾಡಲು ಮುಂದಾಗಿದ್ದು, ಜಿಂದಾಲ್ ಕಂಪನಿಯ ಪರವಾಗಿ ಶುದ್ಧ ಕ್ರಯ ಪತ್ರವನ್ನು ಮಾಡಿಕೊಡಲು ರಾಜ್ಯ ಸಚಿವ ಸಂಪುಟ ಸಭೆಗೆ ಪ್ರಸ್ತಾವನೆ ಸಲ್ಲಿಸಿದೆ. ಈ ಜಮೀನಿನಲ್ಲಿ ಜಿಂದಾಲ್ ಕಂಪನಿಯು ಏನನ್ನು ಮಾಡಲು ಸರ್ಕಾರದಿಂದ ಪಡೆದಿತ್ತೋ ಅದನ್ನು ಹಾಗೇ ಲೀಜ್ ಆಫ್ ಅಗ್ರಿಮೆಂಟ್ ಪ್ರಕಾರ ಮುಂದುವರೆಸಿಕೊಂಡು ಹೋಗಬೇಕೇ ಹೊರತು ಯಾವುದೇ ಕಾರಣಕ್ಕೂ ನಮ್ಮ ನೆಲವನ್ನು ಜಿಂದಾಲ್​ಗೆ ಮಾರಾಟ ಮಾಡಲು ಬಿಡುವುದಿಲ್ಲ. ಒಂದು ವೇಳೆ ರಾಜ್ಯ ಸರ್ಕಾರ ಜಿಂದಾಲ್​ಗೆ ಭೂಮಿ ಮಾರಾಟ ಮಾಡಿದ್ದೇ ಆದಲ್ಲಿ ಕರ್ನಾಟಕ ಜನಸೈನ್ಯ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕೆ.ಎರಿಸ್ವಾಮಿ

ಮೇಲ್ಸೇತುವೆ ನಿರ್ಮಾಣ ಮಾಡಿ:

ಜಿಂದಾಲ್ ಕಂಪನಿ ಸಂಡೂರ ತೋರಣಗಲ್ಲು ಮಾರ್ಗವಾಗಿ ರೈಲ್ವೆ ಗೇಟ್ ನಿರ್ಮಾಣ ಮಾಡಿದರೆ ಗೇಟ್ ಹಾಕಿದಾಗ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಆ್ಯಂಬುಲೆನ್ಸ್​ ಹಾಗೂ ತುರ್ತುಪರಿಸ್ಥಿತಿ ಸೇವೆಗೆ ಅಡ್ಡಿಯಾಗಲಿದೆ. ಹೀಗಾಗಿ ಮೇಲ್ಸೇತುವೆ ನಿರ್ಮಾಣ ಮಾಡಿ ಎಂದು ಎರಿಸ್ವಾಮಿ ಆಗ್ರಹಿಸಿದರು.

For All Latest Updates

TAGGED:

ABOUT THE AUTHOR

...view details