ಬಳ್ಳಾರಿ: ಬಿಜೆಪಿಗೆ ವೋಟ್ ಹಾಕ್ತಿಯಾ? ಹಾಕ್ಕೊ ಹೋಗಪ್ಪಾ, ನನಗೇನು ಸಮಸ್ಯೆಯಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಈ.ತುಕಾರಾಂ ಮತದಾರನ ಮೇಲೆ ಸಿಡಿಮಿಡಿಗೊಂಡ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಿಜೆಪಿಗೆ ವೋಟ್ ಹಾಕ್ತಿಯಾ? ಹಾಕ್ಕೊ ಹೋಗಪ್ಪಾ: ಸಚಿವ ತುಕಾರಾಂರ ವಿಡಿಯೋ ವೈರಲ್ - undefined
ಸಂಡೂರು ತಾಲೂಕಿನ ಗಂಗಲಾಪುರ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಬಳ್ಳಾರಿ ಲೋಕಸಭಾ ಅಭ್ಯರ್ಥಿ ವಿ.ಎಸ್.ಉಗ್ರಪ್ಪನವರ ಪರವಾಗಿ ವೈದ್ಯಕೀಯ ಶಿಕ್ಷಣ ಸಚಿವ ಈ.ತುಕಾರಾಂ ಮತಯಾಚನೆ. ಪ್ರಚಾರ ಭಾಷಣದ ವೇಳೆ ಜಿಂದಾಲ್ ಕಾರ್ಖಾನೆಯಲ್ಲಿ ಉದ್ಯೋಗ ಅವಕಾಶ ಕಲ್ಪಿಸಿಕೊಡುವಂತೆ ಕೇಳಿದ ಯುವಕನ ಮೇಲೆ ಕೆಂಡಾಮಂಡಲ.
ಜಿಲ್ಲೆಯ ಸಂಡೂರು ತಾಲೂಕಿನ ಗಂಗಲಾಪುರ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಬಳ್ಳಾರಿ ಲೋಕಸಭಾ ಅಭ್ಯರ್ಥಿ ವಿ.ಎಸ್.ಉಗ್ರಪ್ಪನವರ ಪರವಾಗಿ ಮತಯಾಚನೆ ವೇಳೆ ಸಚಿವ ತುಕಾರಾಂ ಅವರ ಏರು ಧ್ವನಿಯಲ್ಲಿ ಭಾಷಣ ಮಾಡಿರುವ ವಿಡಿಯೋ ತುಣುಕೊಂದು ಇದೀಗ ವೈರಲ್ ಆಗಿ ಸಾಮಾಜಿಕ ಜಾಲತಾಣಗಳಲ್ಲಿ ಪರ, ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿವೆ.
ನೀವು ಜಿಂದಾಲ್ ಕೈಗಾರಿಕೆ ಕಂಪನಿಯಲ್ಲಿ ಕೆಲಸ ಕೊಡಿಸಲು ಶಿಫಾರಸು ಪತ್ರ ಯಾಕೆ ಕೊಡ್ತಾ ಇಲ್ಲ ಅಂತಾ ಸಚಿವರನ್ನ ಆ ಯುವಕ ಪ್ರಶ್ನೆ ಮಾಡಿದ್ದಾನೆ. ಅದಕ್ಕೆ ಸಚಿವರು ನೋಡಪ್ಪ ನನ್ನ ಕೈಲಾದ್ದನ್ನು ನಾನು ಮಾಡಿದ್ದೇನೆ. ಎಲ್ಲರಿಗೂ ಉದ್ಯೋಗ ಕೊಡಿಸೋಕೆ ಆಗಲ್ಲ. ನೀನು ಬಿಜೆಪಿಗೆ ವೋಟ್ ಹಾಕೋದಾದ್ರೆ ಆಯ್ತು, ಹಾಕ್ಕೊ ಹೋಗಪ್ಪಾ, ನನಗೇನು ಸಮಸ್ಯೆಯಿಲ್ಲ ಅಂತಾ ಸಚಿವ ಈ ತುಕಾರಾಂ ಯುವಕನ ಮೇಲೆ ಕೆಂಡಾಮಂಡಲರಾಗಿದ್ದಾರೆ.