ಕರ್ನಾಟಕ

karnataka

ETV Bharat / city

ಮೊದಲು ಕೊರೊನಾ ವಾರಿಯರ್ಸ್​ಗೆ ಲಸಿಕೆ ಹಾಕಲಿ, ಆಮೇಲೆ ನಮಗೆ: ಶಾಸಕ ಸೋಮಶೇಖರ ರೆಡ್ಡಿ - ಬಳ್ಳಾರಿ ಕೊರೊನಾ ಲಸಿಕೆ ಅಭಿಯಾನ

ಜಿಲ್ಲಾಸ್ಪತ್ರೆ ಆವರಣದ ಪ್ರಾಥಮಿಕ‌ ಆರೋಗ್ಯ ಪರೀಕ್ಷಾ ಕೇಂದ್ರದಲ್ಲಿ ನಡೆದ ಕೋವಿಶಿಲ್ಡ್ ಲಸಿಕೆ ಅಭಿಯಾನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಮೊದಲು ಕೊರೊನಾ ವಾರಿಯರ್ಸ್​ಗೆ ಲಸಿಕೆ ಹಾಕಬೇಕು. ಆ ಮೇಲೆ ನಮಗೆ ಹಾಕಲಿ ಎಂದು ಶಾಸಕ ಗಾಲಿ‌ ಸೋಮಶೇಖರ ರೆಡ್ಡಿ ಹೇಳಿದರು.

vaccinate-the-corona-warriors-first-then-us
ಶಾಸಕ ಸೋಮಶೇಖರರೆಡ್ಡಿ

By

Published : Jan 16, 2021, 8:00 PM IST

ಬಳ್ಳಾರಿ: ಮಹಾಮಾರಿ ಕೊರೊನಾ ಸಂದರ್ಭದಲ್ಲಿ ಅವಿರತವಾಗಿ ಶ್ರಮಿಸಿದ ಕೊರೊನಾ ವಾರಿಯರ್ಸ್​ಗೆ ಕೋವಿಶಿಲ್ಡ್ ಲಸಿಕೆಯನ್ನ ಹಾಕಲು ಮೊದಲು ಆದ್ಯತೆ ನೀಡಲಿ. ಆ ಮೇಲೆ ಈ ಲಸಿಕೆಯನ್ನು ನಮಗೆ ಹಾಕಲಿ ಎಂದು ಶಾಸಕ‌ ಗಾಲಿ‌ ಸೋಮಶೇಖರ ರೆಡ್ಡಿ ಹೇಳಿದರು.

ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ಗಾಲಿ ಸೋಮಶೇಖರ ರೆಡ್ಡಿ

ಜಿಲ್ಲಾಸ್ಪತ್ರೆ ಆವರಣದ ಪ್ರಾಥಮಿಕ‌ ಆರೋಗ್ಯ ಪರೀಕ್ಷಾ ಕೇಂದ್ರದಲ್ಲಿ ನಡೆದ ಕೋವಿಶಿಲ್ಡ್ ಲಸಿಕೆ ಅಭಿಯಾನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಮೊದಲು ಕೊರೊನಾ ವಾರಿಯರ್ಸ್​ಗೆ ಲಸಿಕೆ ಹಾಕಬೇಕು. ಆ ಮೇಲೆ ನಮಗೆ ಹಾಕಲಿ.‌ ಯಾಕಂದ್ರೆ, ಅವರೆಲ್ಲರೂ ಮಹಾಮಾರಿ ಕೊರೊನಾ ತಡೆಗಟ್ಟಲು ಶ್ರಮವಹಿಸಿದ್ದಾರೆ. ಹೀಗಾಗಿ, ಮೊದಲು ಅವರಿಗೆ ಲಸಿಕೆ ನೀಡಬೇಕು ಎಂದು ತಿಳಿಸಿದರು.

ABOUT THE AUTHOR

...view details