ಬಳ್ಳಾರಿ:ಮಹಾನಗರ ಪಾಲಿಕೆ ಚುನಾವಣೆ ವಿಚಾರವಾಗಿ ಎರಡು ಪಕ್ಷಗಳ ನಡುವೆ ಗಲಾಟೆ ನಡೆದು ಇಬ್ಬರಿಗೆ ಗಾಯವಾಗಿರುವ ಘಟನೆ ರೇಡಿಯೋ ಪಾರ್ಕ್ ವೃತ್ತದ ಬಳಿ ನಡೆದಿದೆ.
ರೇಡಿಯೋ ಪಾರ್ಕ್ನಲ್ಲಿ ಪಟಾಕಿ ಸಿಡಿಸಿದಕ್ಕೆ ಎರಡು ಪಕ್ಷಗಳ ನಡುವೆ ಗಲಾಟೆ ನಡೆದಿದ್ದು, ಬಿಜೆಪಿಯ ತರುಣ್ (18) ಮತ್ತು ಅರವಿಂದ್ (30) ಇಬ್ಬರಿಗೆ ಮುಖಕ್ಕೆ ಮತ್ತು ಕೈಕಾಲುಗಳಿಗೆ ಹೊಡೆದಿದ್ದಾರೆ ಎಂದು ದೂರಲಾಗಿದೆ.
ಕಾಂಗ್ರೆಸ್ನ ಮುಖಂಡರು ಮತ್ತು ಸದಸ್ಯರು ರೇಡಿಯೋ ಪಾರ್ಕ್ನ ವೃತ್ತದಲ್ಲಿ ಪಟಾಕಿ ಸಿಡಿಸಿ, ನಾವು ಜಯಗಳಿಸಿದ್ದೇವೆ ಎಂದು ಕೂಗಾಡಿದ್ದಾರೆ. ಇದು ಮಾತಿಗೆ ಬೆಳೆದು ಗಲಾಟೆಯಾಗಿದೆ ಎಂದು ಸ್ಥಳದಲ್ಲಿದ್ದವರು ಮಾಹಿತಿ ನೀಡಿದ್ದಾರೆ.
ಚುನಾವಣೆ ವಿಚಾರವಾಗಿ ಎರಡು ಪಕ್ಷಗಳ ನಡುವೆ ಗಲಾಟೆ ಗಲಾಟೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಆಗಮಿಸಿ ಲಾಟಿ ಬೀಸಿದ್ದಾರೆ. ಈ ಸಮಯದಲ್ಲಿ ಮಾಜಿ ಎ.ಪಿ.ಎಂ.ಸಿ ಅಧ್ಯಕ್ಷ ನಾಗರಾಜ್ ಮಾತನಾಡಿ, ಈ ಗಲಾಟೆಯಲ್ಲಿ ಕಾಂಗ್ರೆಸ್ನ ಅಕ್ಬರ್ ಮತ್ತು ಅವರ ಅಕ್ಕನ ಮಕ್ಕಳು, ಇಕ್ಬಾಲ್ ಮತ್ತು ಅಬ್ಬು , ಜಾಫರ್ ಮತ್ತು ಎಂ.ಎಲ್.ಎ ಅವರ ಕೈವಾಡವಿದೆ ಎಂದು ಆರೋಪಿಸಿದರು. ಇನ್ನು ಸ್ಥಳದಲ್ಲಿ ಸಿಪಿಐ ಚಂದನ್ ಗೋಪಾಲ, ವಾಸು ಕುಮಾರ್ ಮತ್ತು ಡಿ.ಎ.ಆರ್ ಪೊಲೀಸ್ ಸಿಬ್ಬಂದಿಗಳು ಮತ್ತು ಕೌಲ್ ಬಜಾರ್ ಠಾಣೆಯ ಪೊಲೀಸರು ಹಾಜರಿದ್ದರು.
ಇದನ್ನೂ ಓದಿ:ರಾಜ್ಯದ ಕೋವಿಡ್ ಪರಿಸ್ಥಿತಿ ಸಂಬಂಧ ಮಹತ್ವದ ವಿಚಾರಗಳ ಚರ್ಚೆ ನಡೆಸಿದ ಸುರ್ಜೆವಾಲಾ - ಡಿಕೆಶಿ