ಕರ್ನಾಟಕ

karnataka

ETV Bharat / city

ಭತ್ತ ಖರೀದಿಸಿ ಹಣ ನೀಡದೆ ಮಾಲೀಕರು ಪರಾರಿ: ರೈತ ಸಂಘಟನೆ ಆರೋಪ - ಬಳ್ಳಾರಿ ರೈಸ್​ ಮಿಲ್ ವಂಚನೆ ಪ್ರಕರಣ

ಭತ್ತ ಖರೀದಿಸಿ ಹಣ ನೀಡದೆ ಕೋಟ್ಯಂತರ ರೂಪಾಯಿ ಹಣ ವಂಚಿಸಿ ಪರಾರಿಯಾಗಿರುವ ರೈಸ್ ಮಿಲ್ ಮಾಲೀಕರ ವಿರುದ್ಧ ಶಿಸ್ತುಕ್ರಮ ಕೈಗೊಂಡು ರೈತರಿಗೆ ನ್ಯಾಯ ಒದಗಿಸಬೇಕು ಎಂದು ತುಂಗಭದ್ರ ರೈತ ಸಂಘ ಸರ್ಕಾವನ್ನು ಒತ್ತಾಯಿಸಿದೆ.

tungabhadra-farmer-union-demand-rice-mill-owner-to-pay-rice-money
ರೈತರ ಬತ್ತ ಖರೀದಿಸಿ ಹಣ ನಿಡದೆ ಮಾಲೀಕರ ಪರಾರಿ

By

Published : Feb 24, 2020, 3:44 PM IST

ಬಳ್ಳಾರಿ: ರೈತರ ಭತ್ತ ಖರೀದಿಸಿ ಹಣ ನೀಡದೆ ಕೋಟ್ಯಂತರ ರೂಪಾಯಿ ಹಣ ವಂಚಿಸಿ ಪರಾರಿಯಾಗಿರುವ ರೈಸ್ ಮಿಲ್ ಮಾಲೀಕರ ವಿರುದ್ಧ ಶಿಸ್ತುಕ್ರಮ ಕೈಗೊಂಡು ರೈತರಿಗೆ ನ್ಯಾಯ ಒದಗಿಸಬೇಕು ಎಂದು ತುಂಗಭದ್ರ ರೈತ ಸಂಘದ ಜಿಲ್ಲಾಧ್ಯಕ್ಷ ದರೂರು ಪುರುಷೋತ್ತಮ ಗೌಡ ಆಗ್ರಹಿಸಿದರು.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮತನಾಡಿದ ಅವರು, ರೈಸ್ ಮಿಲ್​​ನವರು ಕಂಪ್ಲಿ, ಕುರುಗೋಡು, ಸಿರಗುಪ್ಪ, ಬಳ್ಳಾರಿ ತಾಲೂಕುಗಳ ರೈತರಿಗೆ ₹4 ಕೋಟಿಗೂ ಹೆಚ್ಚಿನ ಹಣ ಮೋಸ ಮಾಡಿದ್ದಾರೆ. ಬ್ಯಾಂಕ್​​ನವರು ರೈಸ್ ಮಿಲ್​​ನವರ ಆಸ್ತಿ ಜಪ್ತಿ ಮಾಡಿಕೊಳ್ಳಬೇಕು. ರೈತರ ದಾಸ್ತನನ್ನು ಅವರಿಗೆ ಕೊಡಬೇಕು. ಇಬ್ಬರ ನಡುವೆ ರೈತರನ್ನು ಹಿಂಸಿಸಬಾರದು ಎಂದರು.

ರೈತರ ಭತ್ತ ಖರೀದಿಸಿ ಹಣ ನೀಡದೆ ಮಾಲೀಕ ಪರಾರಿ ಆರೋಪ

ಸಿಂಧನೂರು ತಾಲೂಕಿನಾದ್ಯಂತ ಅಂದಾಜು ₹500 ಕೋಟಿ ರೂ. ಅನ್ಯಾಯವಾಗಿರುವ ಕಾರಣ ಗೋದಾಮುಗಳಲ್ಲಿ ಸಂಗ್ರಹಿಸಲು ರೈತರಿಗೆ ಬ್ಯಾಂಕುಗಳು ಸಾಲ ನೀಡಲಿಲ್ಲ. ಆದ್ದರಿಂದ ರೈತರು ರೈಸ್ ಮಿಲ್​​ಗಳಲ್ಲಿ ಬೆಳೆದ ಭತ್ತವನ್ನು ಸಂಗ್ರಹಣೆಗಿಟ್ಟು ಮೊಸ ಹೋಗಿದ್ದಾರೆ. ರೈತರಿಗೆ ಮೋಸ ಮಾಡಿ ಪರಾರಿಯಾಗಿರುವ ರೈಸ್ ಮಿಲ್ ಮಾಲೀಕರ ಪತ್ತೆಗೆ ಸರಿಯಾದ ತನಿಖೆ ನಡೆಯುತ್ತಿಲ್ಲ. ಇದೇ ರೀತಿ ನಡೆಯುತ್ತಿದ್ದರೆ ರೈತರು ಬದುಕುವುದು ಕಷ್ಟಕರವಾಗಲಿದೆ. ಶೀಘ್ರ ಸೂಕ್ತ ಕ್ರಮ ಕೈಗೊಂಡು ರೈತರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ABOUT THE AUTHOR

...view details