ಕರ್ನಾಟಕ

karnataka

ETV Bharat / city

ಹರಿಶ್ಚಂದ್ರ ಕಾವ್ಯ ಮತ್ತು ಸಮಕಾಲೀನ ಮೌಲ್ಯಗಳ ಬಗ್ಗೆ ಡಾ.ಜಯಶ್ರೀ ದಂಡಿ ಉಪನ್ಯಾಸ - Literature dr.jayashree dandi

ಹಂಪಿ ವಿರೂಪಾಕ್ಷ ದೇವಾಲಯ ಮಂಟಪದಲ್ಲಿ ಇಂದು ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಹರಿಶ್ಚಂದ್ರ ಕಾವ್ಯ ಮತ್ತು ಸಮಕಾಲೀನ ಮೌಲ್ಯಗಳ ಕುರಿತು ಸಾಹಿತಿ ಡಾ.ಜಯಶ್ರೀ ದಂಡಿ ಉಪನ್ಯಾಸ ನೀಡಿದರು.

truth-never-die
ಸಾಹಿತಿ ಡಾ.ಜಯಶ್ರೀ ದಂಡಿ

By

Published : Jan 11, 2020, 6:22 PM IST

ಹೊಸಪೇಟೆ: ಎಷ್ಟೇ ಕಷ್ಟ ಬಂದರೂ ಸತ್ಯಹರಿಶ್ಚಂದ್ರ ಮಾತ್ರ ಸುಳ್ಳನ್ನು ಮಾತನಾಡಿರಲಿಲ್ಲ. ಸತ್ಯವನ್ನೇ ಹೇಳುವುದಕ್ಕೆ ಹರಿಶ್ಚಂದ್ರನಿಗೆ ಹೆಂಡತಿ ಚಂದ್ರಮತಿ ಅವರು ಮುಖ್ಯ ಪಾತ್ರವಹಿಸಿದ್ದಾರೆ. ಹೀಗೆ ಪ್ರತಿಯೊಬ್ಬ ವ್ಯಕ್ತಿ ಬದಲಾವಣೆಯ ಹಿಂದೆ ಹೆಣ್ಣಿನ ಪರಿಶ್ರಮ ಇದ್ದೇ ಇರುತ್ತದೆ. ಆದ್ದರಿಂದ ಹೆಣ್ಣಿಗೆ ಉತ್ತಮ ಗೌರವ ನೀಡಬೇಕು ಎಂದು ಸಾಹಿತಿ ಡಾ.ಜಯಶ್ರೀ ದಂಡಿ ಹೇಳಿದರು.

ಹಂಪಿ ವಿರೂಪಾಕ್ಷ ದೇವಾಲಯ ಮಂಟಪದಲ್ಲಿ ಇಂದು ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಹರಿಶ್ಚಂದ್ರ ಕಾವ್ಯ ಮತ್ತು ಸಮಕಾಲೀನ ಮೌಲ್ಯಗಳ ಕುರಿತು ಉಪನ್ಯಾಸ ನೀಡಿದರು.

ಸಾಹಿತಿ ಡಾ.ಜಯಶ್ರೀ ದಂಡಿ

ಸತ್ಯಕ್ಕೆ ಎಂದಿಗೂ ಸಾವಿಲ್ಲ. ಸತ್ಯಹರಿಶ್ಚಂದ್ರ ತನ್ನ ಜೀವನದಲ್ಲಿ ಸತ್ಯವನ್ನು ಬಿಟ್ಟು ಬೇರೇ ಏನನ್ನೂ ಹೇಳಿಲ್ಲ. ಅದಕ್ಕಾಗಿ ಅವರು ಬದುಕಿನುದ್ದಕ್ಕೂ ನೋವಿನ ಹಾದಿಯಲ್ಲೇ ಸಾಗಿದರು ಎಂದರು.

ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಸತ್ಯದ ಬಗ್ಗೆಯೇ ಪಾಠ, ಪ್ರವಚನ ನೀಡಬೇಕು. ಜನಸಾಮಾನ್ಯರೂ ಸತ್ಯಹರಿಶ್ಚಂದ್ರನ ನಾಟಕಗಳನ್ನು ಆಯೋಜಿಸಬೇಕು ಎಂದು ಸಲಹೆ ನೀಡಿದ ಅವರು, ಹರಿಶ್ಚಂದ್ರ ನಾಟಕವನ್ನು ನೋಡಿ ಮಹಾನ್ ವ್ಯಕ್ತಿಗಳು ತಮ್ಮ ವ್ಯಕ್ತಿತ್ವ ಬದಲಾಯಿಸಿಕೊಂಡಿದ್ದಾರೆ ಎಂದು ಹೇಳಿದರು.

ABOUT THE AUTHOR

...view details