ಬಳ್ಳಾರಿ:ಗಣಿನಾಡು ಬಳ್ಳಾರಿ ನಗರದ ರೈಲ್ವೆ ನಿಲ್ದಾಣದಲ್ಲಿ ಸಾವಿರಾರು ಕಬ್ಬಕ್ಕಿಗಳು (ರೋಜಿಸ್ಟಾರ್ಲಿಂಗ್ ) ಗುಂಪು ಗುಂಪಾಗಿ ಹಾರಾಡುತ್ತಿದ್ದು, ನೋಡುಗರನ್ನು ತಮ್ಮತ್ತ ಸೆಳೆಯುತ್ತಿವೆ.
ಗಣಿನಾಡಿನಲ್ಲಿ ರೈತರ ಮಿತ್ರ ಕಬ್ಬಕ್ಕಿಗಳ ಕಲರವ: ಪಕ್ಷಿ ಪ್ರಿಯರಿಗೆ ಆನಂದ - ಮೈನಾ ಹಕ್ಕಿಯ ಗ್ರಾತದ ಈ ಪಕ್ಷಿ
ಗಣಿನಾಡು ಬಳ್ಳಾರಿ ನಗರದ ರೈಲ್ವೆ ನಿಲ್ದಾಣದಲ್ಲಿ ಸಾವಿರಾರೂ ಕಬ್ಬಕ್ಕಿಗಳು (ರೋಜಿಸ್ಟಾರ್ಲಿಂಗ್) ಗುಂಪು ಗುಂಪಾಗಿ ಹಾರಾಡುತ್ತಿದ್ದು ನೋಡುಗರನ್ನು ಆಕರ್ಷಿಸುತ್ತಿವೆ.
![ಗಣಿನಾಡಿನಲ್ಲಿ ರೈತರ ಮಿತ್ರ ಕಬ್ಬಕ್ಕಿಗಳ ಕಲರವ: ಪಕ್ಷಿ ಪ್ರಿಯರಿಗೆ ಆನಂದ ka_bly_01_181219_birdsnewsbyte_ka10007](https://etvbharatimages.akamaized.net/etvbharat/prod-images/768-512-5409126-thumbnail-3x2-lek.jpg)
ಕಬ್ಬಕ್ಕಿ (ರೋಜಿಸ್ಟಾರ್ಲಿಂಗ್ ) ಪಕ್ಷಿಗಳ ಬಗ್ಗೆ ಮಾಹಿತಿ:
ಪಕ್ಷಿ ಸಂರಕ್ಷಕ ಮತ್ತು ವನ್ಯಜೀವಿ ಛಾಯಾಚಿತ್ರಕ ಪನಮೇಶ್ ಎಗವಹಳ್ಳಿ ತಿಳಿಸಿದಂತೆ, ಪ್ರತಿವರ್ಷ ಚಳಿಗಾಲದಲ್ಲಿ ದಕ್ಷಿಣ ಭಾರತ ಮತ್ತು ಗಣಿನಾಡು ಬಳ್ಳಾರಿ ಜಿಲ್ಲೆಗೆ ಸಾವಿರಾರು ಸಂಖ್ಯೆಯಲ್ಲಿ ಯೂರೊಪ್, ಫ್ರಾನ್ಸ್, ಜರ್ಮನಿ ದೇಶಗಳಿಂದ ಪ್ರತಿ ವರ್ಷ ವಲಸೆ ಬರುತ್ತವೆ.
ಮೈನಾ ಹಕ್ಕಿಯ ಗ್ರಾತದ ಈ ಪಕ್ಷಿ ವಿಶೇಷವಾಗಿ ಹಗಲಿನಲ್ಲಿ ರೈತರ ಬೆಳೆಗಳಿಗೆ ಬಂದು ಕೀಟ, ಮಿಡತೆ, ಹುಳುಗಳನ್ನು ತಿನ್ನುತ್ತವೆ. ಹಾಗಾಗಿಯೇ ಈ ಪಕ್ಷಿಗಳನ್ನು " ರೈತರ ಮಿತ್ರ " ಎಂದು ಕರೆಯುತ್ತಾರೆ. ಚಳಿಗಾಲ ಮುಗಿದ ನಂತರ ಮತ್ತೆ ಸ್ವದೇಶಕ್ಕೆ ಹಿಂತಿರುಗಿ ಸಂತಾನೋತ್ಪತ್ತಿ ಮಾಡುತ್ತವೆ ಎಂದು ಮಾಹಿತಿ ಕೊಟ್ಟರು.