ಹೊಸಪೇಟೆ (ವಿಜಯನಗರ):ಮನೆಯೊಂದರ ಬೀಗ ಮುರಿದು ಬೆಳ್ಳಿ ಆಭರಣಗಳನ್ನು ದೋಚಿದ್ದ ಖದೀಮರು ಮಾರಲು ತೆರಳಿದ್ದ ಸಂದರ್ಭದಲ್ಲಿ ಸಿಕ್ಕಿಬಿದ್ದಿದ್ದಾರೆ.
ಹೊಸಪೇಟೆನಗರದ ಆನಂದ (28), ಬಿ.ಗೋವಿಂದ (33) ಬಂಧಿತರು. ನಗರದ ಕೌಲ್ ಪೇಟೆಯ ಮಟನ್ ಮಾರುಕಟ್ಟೆ ಓಣಿಯ ದಾದಾ ಖಲಂದರ್ ಎಂಬುವವರ ಮನೆಯಲ್ಲಿದ್ದ 28 ಸಾವಿರ ಮೌಲ್ಯದ ಬೆಳ್ಳಿಯ ಆಭರಣಗಳು ಕಳುವಾಗಿದ್ದವು. ಈ ಕುರಿತು ಜುಲೈ 17ರಂದು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಪತ್ತೆಗಾಗಿ ಪಟ್ಟಣ ಠಾಣೆಯ ಪಿಐ ಎಂ.ಶ್ರೀನಿವಾಸ ಅವರ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು.