ಕರ್ನಾಟಕ

karnataka

ETV Bharat / city

ರೈಲ್ವೆ ನಿಲ್ದಾಣದ ಕ್ಯಾಂಟೀನ್​​ಗಳಲ್ಲಿಲ್ಲ ಶುಲ್ಕದ ನಾಮಫಲಕ... ಗ್ರಾಹಕರಿಗೆ ಮೋಸ ಆರೋಪ - ಬಳ್ಳಾರಿ ಜಿಲ್ಲೆಯಲ್ಲಿರುವ ರೈಲು ನಿಲ್ದಾಣಗಳು

ಬಳ್ಳಾರಿ ನಗರದ ರೈಲ್ವೆ ನಿಲ್ದಾಣದಲ್ಲಿರುವ ಕ್ಯಾಂಟೀನ್​​ಗಳಲ್ಲಿ ಆಹಾರ ಪದಾರ್ಥಗಳ ಶುಲ್ಕದ ನಾಮಫಲಕ ಹಾಕದೇ ಜನರಿಗೆ ಮೋಸ ಮಾಡಲಾಗುತ್ತಿದೆ ಎಂಬುದು ಗ್ರಾಹಕರ ಆರೋಪವಾಗಿದೆ.

ಕ್ಯಾಂಟೀನ್​​ಗಳಲ್ಲಿಲ್ಲ ಶುಲ್ಕದ ನಾಮಫಲಕ

By

Published : Oct 14, 2019, 10:21 PM IST

ಬಳ್ಳಾರಿ: ನಗರದ ರೈಲ್ವೆ ನಿಲ್ದಾಣದಲ್ಲಿರುವ ಕ್ಯಾಂಟೀನ್​​ಗಳಲ್ಲಿ ಆಹಾರ ಪದಾರ್ಥಗಳ ಶುಲ್ಕದ ನಾಮಫಲಕ ಹಾಕದೇ ಜನರಿಗೆ ಮೋಸ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ರೈಲ್ವೆ ನಿಲ್ದಾಣದ ಕ್ಯಾಂಟೀನ್​​ಗಳಲ್ಲಿಲ್ಲ ಶುಲ್ಕದ ನಾಮಫಲಕ...

ಹೌದು.., ಪ್ರಯಾಣಿಕರು ಪಡೆಯುವ ಉಪಹಾರ, ಊಟ, ಕಾಫಿ, ಟೀ ಮತ್ತು ಇನ್ನಿತರ ಆಹಾರ ಪದಾರ್ಥಗಳಿಗೆ ಯಾವ ವಸ್ತುಗಳಿಗೆ ಎಷ್ಟು ಬೆಲೆ ಎಂದು ನಾಮಫಲಕಗಳೆ ಇಲ್ಲ. ಹೀಗಾಗಿ ಜನರಿಂದ ಹೆಚ್ಚು ಹಣ‌ ಪಡೆದುಕೊಂಡು ಮೋಸ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಗ್ರಾಹಕರಿಗೆ ಕಾಣುವಂತೆ ವಸ್ತುಗಳ ಬೆಲೆಯನ್ನು ಕ್ಯಾಂಟಿನ್ ಅಥವಾ ಹೋಟೆಲ್ ಹೊರಗಡೆ ಹಾಕಬೇಕು. ಶುಲ್ಕದ ನಾಮಫಲಕ ಹಾಕದೇ ಪ್ರತಿಯೊಂದು ಆಹಾರ ಪದಾರ್ಥಗಳಿಗೆ ‌ 5 ರಿಂದ 10 ರೂಪಾಯಿ ಹೆಚ್ಚಾಗಿ ಗ್ರಾಹಕರಿಂದ ಪಡೆಯುತ್ತಾರೆ. ಸಂಬಂಧಪಟ್ಟ ಅಧಿಕಾರಿಗಳು ಕೂಡ ಯಾವುದೇ ಸೂಕ್ತ ಕ್ರಮ ತೆಗೆದುಕೊಳ್ಳದೆ ಸುಮ್ಮನೆ ಕುಳಿತಿದ್ದಾರೆ ಎಂಬುದು ಗ್ರಾಹಕರ ಆರೋಪವಾಗಿದೆ.

ABOUT THE AUTHOR

...view details