ಕರ್ನಾಟಕ

karnataka

ETV Bharat / city

ಕಳ್ಳರಿಗೂ ಇದೇ ಚಾನ್ಸ್‌.. ಒಂದೇ ದಿನ ಎರಡು ಮನೆಗಳಲ್ಲಿ ಕಳ್ಳತನ.. - ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಪಟ್ಟಣ ಕಳ್ಳತನ ನ್ಯೂಸ್​

ರಜೆಯ ನಿಮಿತ್ತ ಬೇರೊಂದು ಊರಿಗೆ ಉಭಯ ಕುಟುಂಬಸ್ಥರು ತೆರಳಿದ್ದಾಗ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಪಟ್ಟಣದಲ್ಲಿ ಸರಣಿ ಕಳ್ಳತನ ನಡೆದಿವೆ.

Theft in two houses in one day at bellary
ಸ್ಥಳಕ್ಕೆ ಶ್ವಾನದಳದೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು

By

Published : Mar 25, 2020, 7:49 AM IST

ಬಳ್ಳಾರಿ: ಒಂದೇ ದಿನ ಎರಡು ಮನೆಗಳಲ್ಲಿ ಕಳ್ಳತನ ನಡೆದ ಘಟನೆ ಜಿಲ್ಲೆಯ ಸಿರುಗುಪ್ಪ ಪಟ್ಟಣದ ಪಾರ್ವತಿ‌ನಗರದಲ್ಲಿ ಕಂಡು ಬಂದಿದೆ. ಹಳೇ ಕೆಂಚನಗುಡ್ಡ ರಸ್ತೆಯಲ್ಲಿರುವ ಗೌಸಿಯಾ ಮಸೀದಿ ಬಳಿಯ ನಿವಾಸಿ ಚಾಂದ್ ಬಾಷಾ ಹಾಗೂ‌ ಪಾರ್ವತಿ ನಗರದ 8ನೇ ವಾರ್ಡಿನ ನಿವಾಸಿ ನವೀನ್‌ಕುಮಾರ್​ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದೆ. ಸಿರುಗುಪ್ಪ ಠಾಣೆಯ ಪೊಲೀಸರು ಶ್ವಾನದಳದೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶ್ವಾನದಳದಿಂದ ಸ್ಥಳ ಪರಿಶೀಲನೆ..

ರಜೆಯ ನಿಮಿತ್ತ ಬೇರೊಂದು ಊರಿಗೆ ಉಭಯ ಕುಟುಂಬಸ್ಥರು ತೆರಳಿದ್ದಾಗ ಈ ಘಟನೆ ನಡೆದಿದೆ. ವಾಪಸ್ ಮನೆಗೆ ಬಂದಾಗ‌ ಮನೆಯ ಬಾಗಿಲು ತೆರೆದಿತ್ತು. ತಿಜೋರಿಯಲ್ಲಿದ್ದ ಹಣ ಹಾಗೂ ಚಿನ್ನಾಭರಣ ದೋಚಿಕೊಂಡು ಕಳ್ಳರು ಪರಾರಿಯಾಗಿದ್ದಾರೆಂದು ಚಾಂದ್ ಬಾಷಾ ದೂರು ನೀಡಿದ್ದಾರೆ. ಈ ಕುರಿತು ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details