ಬಳ್ಳಾರಿ: ಯಾವುದೇ ಕಾರಣಕ್ಕೂ ಹಂಪಿ ಉತ್ಸವ ನಿಲ್ಲಬಾರದು. ಹಂಪಿ ಭಾಗದ ಸೊಗಡು, ಸಂಸ್ಕೃತಿ, ಕಲೆ, ಪ್ರತಿಭೆ ಗುರುತಿಸಲು ಪ್ರತಿ ಬಾರಿ 10 ಕೋಟಿ ಮೀಸಲಿಡಬೇಕೆಂದು ನಾವು ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಿದ್ದೇವೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದರು.
ಯಾವುದೇ ಕಾರಣಕ್ಕೂ ಹಂಪಿ ಉತ್ಸವ ನಿಲ್ಲಬಾರದು: ಉಗ್ರಪ್ಪ - Hampi festival issue
ಯಾವುದೇ ಕಾರಣಕ್ಕೂ ಹಂಪಿ ಉತ್ಸವ ನಿಲ್ಲಬಾರದು. ಹಂಪಿ ಭಾಗದ ಸೊಗಡು, ಸಂಸ್ಕೃತಿ, ಕಲೆ, ಪ್ರತಿಭೆ ಗುರುತಿಸಲು ಪ್ರತಿ ಬಾರಿ 10 ಕೋಟಿ ಮೀಸಲಿಡಬೇಕೆಂದು ನಾವು ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಿದ್ದೇವೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದರು.
ಯಾವುದೇ ಕಾರಣಕ್ಕೂ ಹಂಪಿ ಉತ್ಸವ ನಿಲ್ಲಬಾರದು..ವಿ.ಎಸ್.ಉಗ್ರಪ್ಪ
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹಂಪಿ ಉತ್ಸವ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಭಾಗದ ಜನರ ಸ್ವಾಭಿಮಾನದ ಪ್ರತೀಕವಾದ ಹಂಪಿ ಉತ್ಸವ ಯಾಕೆ ಮಾಡಲಿಲ್ಲ. ನಾನು ಈ ವಿಚಾರದಲ್ಲಿ ರಾಜಕೀಯ ಮಾಡಲ್ಲ. ಇದು ನಮ್ಮ ಪಕ್ಷದ ಒತ್ತಾಯವೂ ಕೂಡ ಆಗಿದೆ. ನಾನು ಜಿಲ್ಲಾಡಳಿತದ ಜತೆ ಮಾತನಾಡಿದ್ದೇನೆ. ತಕ್ಷಣ 10 ಕೋಟಿ ಹಣ ಬಿಡುಗಡೆ ಮಾಡಿ ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ಒಂದು ವೇಳೆ ರಾಜ್ಯ ಸರ್ಕಾರ ಹಂಪಿ ಉತ್ಸವ ಮಾಡದೇ ಇದ್ದಲ್ಲಿ ಈ ಭಾಗದ ಜನಪ್ರತಿನಿಧಿಗಳು ಹಾಗೂ ಕಲಾವಿದರ ನಿಯೋಗ ಕೊಂಡೊಯ್ಯುತ್ತೇವೆ ಎಂದರು.