ಬಳ್ಳಾರಿ: ಗಣಿನಗರಿ ಬಳ್ಳಾರಿಗೆ ಇಂದು ಆಗಮಿಸಿದ ನಟಿ ಶಾನ್ವಿ ಶ್ರೀವಾಸ್ತವ್ ಅವರು, ಇನ್ ಫ್ಯಾಂಟರಿ ರಸ್ತೆಯಲ್ಲಿರುವಬಟ್ಟೆ ಮಳಿಗೆಯೊಂದನ್ನು ಉದ್ಘಾಟಿಸಿದರು. ಈ ವೇಳೆ ನಟಿಯೊಂದಿಗೆ ಸೆಲ್ಪಿ ಕ್ಲಿಕಿಸಿಕೊಳ್ಳಲು ಮುಗಿಬಿದ್ದರು.
ಗಣಿನಗರಿಗೆ ಭೇಟಿ ಕೊಟ್ಟ ನಟಿ ಮಾಸ್ಟರ್ ಪೀಸ್ ಬೆಡಗಿ ಶಾನ್ವಿ... ಕಾರಣ ಏನು? - clothing store
ಬಳ್ಳಾರಿಯ ಇನ್ ಫ್ಯಾಂಟರಿ ರಸ್ತೆಯಲ್ಲಿರುವ ಬಟ್ಟೆ ಮಳಿಗೆಯೊಂದನ್ನು ನಟಿ ಶಾನ್ವಿ ಶ್ರೀವಾಸ್ತವ್ ಅವರು ಉದ್ಘಾಟಿಸಿದರು.
The clothing store was inaugurated by actress Shanvi Srivastav
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತ್ಯಂತ ಗುಣಮಟ್ಟ ಬಟ್ಟೆಗಳು ಇಲ್ಲಿ ಲಭ್ಯವಾಗಲಿವೆ. ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಇದೇ ಮೊದಲ ಬಾರಿಗೆ ಬಳ್ಳಾರಿಗೆ ಬಂದಿದ್ದೇನೆ. ಇಲ್ಲಿಗೆ ಸಿನಿಮಾ ಚಿತ್ರೀಕರಣಕ್ಕೆ ಬಂದಿದ್ದೆ. ಬಂದಾಗ ಬಿಸಿಲು ವಿಪರೀತವಾಗಿತ್ತಾದರೂ ಈಗ ತಂಪಾದ ವಾತಾವರಣವಿದೆ. ಬೆಂಗಳೂರು ಎಂದರೆ ತಂಪಾದ ನಗರಿ ಎಂತಲೂ ಕರೆಯಬಹುದು. ಬಳ್ಳಾರಿ ಕೂಡ ಅದೇ ಮಾದರಿಯತ್ತ ಸಾಗುತ್ತಿದೆ ಎಂದರು.