ಬಳ್ಳಾರಿ:ಮೆಣಸಿನಕಾಯಿ ಸೇರಿದಂತೆ ಕೃಷಿ ಬೆಳೆಗಳಿಗೆ ಸಿಂಪಡಿಸಲು ಕೊಂಡೊಯ್ಯುತ್ತಿದ್ದ ಹತ್ತಾರು ಲೀಟರ್ನಷ್ಟು ನಕಲಿ ಕ್ರಿಮಿನಾಶಕ ಔಷಧಿಯನ್ನು ಕೃಷಿ ಇಲಾಖೆ ಜಪ್ತಿ ಮಾಡಿಕೊಂಡಿದ್ದು, ಈ ಕುರಿತು ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಳ್ಳಾರಿಯ ದೇವಿನಗರದ ನಿವಾಸಿ ನೆಟ್ಟಕಲ್ಲಪ್ಪ ಎಂಬವರಿಂದ 20 ಲೀಟರ್ನಷ್ಟು ಕ್ರಿಮಿನಾಶಕ ವಶಪಡಿಸಿಕೊಳ್ಳಲಾಗಿದೆ. ನೆಟ್ಟಕಲ್ಲಪ್ಪ ಅವರು ಲೀಟರ್ ಬಾಟಲ್ಗೆ ಕೇವಲ 100 ರೂಪಾಯಿಗೆ ಮಾರಾಟ ಮಾಡುತ್ತಿದ್ದರು ಎಂಬ ಆರೋಪ ಕೇಳಿ ಬಂದ ಪರಿಣಾಮ ಅಧಿಕಾರಿಗಳು ದಾಳಿ ನಡೆಸಿದ್ದಾರೆ.