ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ತಹಶೀಲ್ದಾರ್ ಹಾಗೂ ದಂಡಾಧಿಕಾರಿಗಳಾದ ಸಂತೋಷ್ ಬಿ. ಕೂಡಲಗಿ ಅವರ ಪತ್ನಿ ವಸತಿ ಗೃಹದಲ್ಲಿ ನೇಣಿಗೆ ಶರಣಾಗಿದ್ದಾರೆ.
ಸಿರುಗುಪ್ಪದ ವಸತಿ ಗೃಹದಲ್ಲಿ ನೇಣಿಗೆ ಶರಣಾದ ತಹಶೀಲ್ದಾರ್ ಪತ್ನಿ - Tahsildar wife suicide
ಸಿರುಗುಪ್ಪ ತಾಲೂಕಿನ ತಹಶೀಲ್ದಾರ್ ಸಂತೋಷ್ ಬಿ. ಕೂಡಲಗಿ ಅವರ ಪತ್ನಿ ವಸತಿ ಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಿರುಗುಪ್ಪ ತಾಲೂಕಿನ ತಹಶೀಲ್ದಾರ್ ವಸತಿ ಗೃಹ
ತಹಶೀಲ್ದಾರ್ ಸಂತೋಷ್ ಅವರು ಕುಟುಂಬ ಸಮೇತರಾಗಿ ವಸತಿಗೃಹದಲ್ಲಿ ವಾಸವಿದ್ದರು. ಈ ಕೆಲ ದಿನಗಳ ಹಿಂದೆ ಇವರನ್ನು ವರ್ಗಾವಣೆ ಮಾಡಲಾಗಿತ್ತು. ಆದರೆ ಚುನಾವಣೆ ಇರುವ ಹಿನ್ನೆಲೆ ಇನ್ನೂ ವಸತಿ ಗೃಹವನ್ನು ಖಾಲಿ ಮಾಡಿರಲಿಲ್ಲ ಎಂದು ತಿಳಿದುಬಂದಿದೆ.
ಸಂತೋಷ್ ಅವರ ಪತ್ನಿ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಸಿರುಗುಪ್ಪ ಶಾಸಕ ಸೋಮಲಿಂಗಪ್ಪ, ಸಿಪಿಐ ಟಿ.ಆರ್. ಪವಾರ್, ಪಿ.ಎಸ್.ಐ ಗಂಗಪ್ಪ ಬೂಲ್ಲಿ ಸೇರಿದಂತೆ ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಆಗಮಿಸಿ ಪ್ರರಿಶೀಲನೆ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.