ಬಳ್ಳಾರಿ: ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ವಿರುದ್ಧ ಅಂತರ್ ರಾಜ್ಯ ಗಡಿ ಗುರುತು ನಾಶಪಡಿಸಿದ ಹಾಗೂ ಗಡಿಧ್ವಂಸ ಪ್ರಕರಣದ ಹಿನ್ನೆಲೆ, ಇಂದು ಸರ್ವೇ ಆಫ್ ಇಂಡಿಯಾ ಡೈರೆಕ್ಟರ್ ಗಳಿಂದ ಗಡಿ ಸರ್ವೇ ಕಾರ್ಯಾರಂಭ ನಡೆಸಲಾಯಿತು.
ಕರ್ನಾಟಕ-ಆಂಧ್ರ ಗಡಿಧ್ವಂಸ ಪ್ರಕರಣ: ಸರ್ವೇ ಆಫ್ ಇಂಡಿಯಾ ಡೈರೆಕ್ಟರ್ಗಳ ಭೇಟಿ, ಪರಿಶೀಲನೆ - ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ
ಕರ್ನಾಟಕಾಂಧ್ರ ಪ್ರದೇಶ ರಾಜ್ಯಗಳ ನಡುವಿನ ಗ್ರಾಮಗಳಾದ ಡಿ.ಹಿರೇಹಾಳ್, ಮಲಪನಗುಡಿ, ಸಿದ್ಧಾಪುರ, ಓಬಳಾಪುರಂ ಹಾಗೂ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಮಾಲೀಕತ್ವದ ಓಎಂಸಿ ಮೈನಿಂಗ್ ಕಂಪನಿಗೆ ಭೇಟಿಕೊಟ್ಟರು. ನಾಳೆಯಿಂದ ಈ ಸರ್ವೇ ಕಾರ್ಯಾರಂಭ ಆಗಲಿದ್ದು, ಸರಿಸುಮಾರು 17 ಕಿಲೋಮೀಟರ್ ಸುತ್ತಲಿನ ಗಡಿಭಾಗದಲ್ಲಿ ಸರ್ವೇಕಾರ್ಯ ಮಾಡಲು ನಿರ್ಧರಿಸಿದೆ.
ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಮಾಲೀಕತ್ವದ ಓಬಳಾಪುರಂ ಮೈನಿಂಗ್ ಕಂಪನಿಯು ಗಡಿ ಒತ್ತುವರಿ ಆರೋಪ ಎದುರಿಸುತ್ತಿದ್ದು. ರೆಡ್ಡಿಯ ಮೇಲೆ ಗಡಿ ಧ್ವಂಸ ಹಾಗೂ ಗಡಿ ಗುರುತು ನಾಶಪಡಿಸಿರುವ ಆರೋಪ ಇತ್ತು. ಅದರ ಬೆನ್ನಲ್ಲೇ ಇಂದು ಸರ್ವೇ ಆಫ್ ಇಂಡಿಯಾ ಡೈರೆಕ್ಟರ್ ಗಳಾದ ಹೈದರಾಬಾದ್ ಮೂಲದ ಮೆಹರಾ, ಪ್ರವೀಣಕುಮಾರ, ಮೈನ್ಸ್ ಆ್ಯಂಡ್ ಜಿಯಾಲಾಜಿಕಲ್ ಅಸಿಸ್ಟೆಂಟ್ ಡೈರೆಕ್ಟರ್ ಬಾಲಾಜಿನಾಯ್ಕ, ಆಂಧ್ರಪ್ರದೇಶ ರಾಜ್ಯದ ಸರ್ವೇ ಇಲಾಖೆಯ ಎಡಿ ಮಚ್ಚೇಂದ್ರ, ಕರ್ನಾಟಕದ ಸರ್ವೇ ಇಲಾಖೆ ಎಡಿ ಸುಮಾನಾಯ್ಕ, ಫಾರೆಸ್ಟ್ ಆಫೀಸರ್ ರಾಮ ಸಿಂಗ್ ನೇತೃತ್ವದ ತಂಡ ಭೇಟಿ ನೀಡಿತು.
ಕರ್ನಾಟಕಾಂಧ್ರ ಪ್ರದೇಶ ರಾಜ್ಯಗಳ ನಡುವಿನ ಗ್ರಾಮಗಳಾದ ಡಿ.ಹಿರೇಹಾಳ್, ಮಲಪನಗುಡಿ, ಸಿದ್ಧಾಪುರ, ಓಬಳಾಪುರಂ ಹಾಗೂ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಮಾಲೀಕತ್ವದ ಓಎಂಸಿ ಮೈನಿಂಗ್ ಕಂಪನಿಗೆ ಭೇಟಿಕೊಟ್ಟರು. ನಾಳೆಯಿಂದ ಈ ಸರ್ವೇ ಕಾರ್ಯಾರಂಭ ಆಗಲಿದ್ದು, ಸರಿಸುಮಾರು 17 ಕಿಲೋಮೀಟರ್ ಸುತ್ತಲಿನ ಗಡಿಭಾಗದಲ್ಲಿ ಸರ್ವೇಕಾರ್ಯ ಮಾಡಲು ನಿರ್ಧರಿಸಿದೆ. ಅಂದಾಜು 130ಕ್ಕೂ ಅಧಿಕ ಕಲ್ಲಿನ ಕಂಬಗಳನ್ನ ಫಿಕ್ಸ್ ಮಾಡಲು ನಿರ್ಧರಿಸಲಾಗಿದೆಂದು ಹೇಳಲಾಗುತ್ತಿದೆ.