ಕರ್ನಾಟಕ

karnataka

ETV Bharat / city

ಕ್ಯಾಮೆರಾ ಪ್ರೇಮಿಯಾದ ಗಣಿನಾಡಿನ ವೈದ್ಯ ಡಾ. ಎಸ್ ಕೆ ಅರುಣ್..

ಬಳ್ಳಾರಿಯ ಸತ್ಯನಾರಾಯಣಪೇಟೆಯ ನಿವಾಸಿಯಾದ ಡಾ. ಎಸ್ ಕೆ ಅರುಣ್ ವೃತ್ತಿಯಲ್ಲಿ ವೈದ್ಯರಾದರೂ ಹವ್ಯಾಸಿ ಛಾಯಾಗ್ರಾಹಕರಾಗಿ ಗುರುತಿಸಿಕೊಂಡಿದ್ದಾರೆ. ವಿಶ್ವ ಛಾಯಾಗ್ರಹಣ ದಿನಾಚರಣೆ ದಿನವಾದ ಇಂದು ಈಟಿವಿ ಭಾರತದೊಂದಿಗೆ ಅವರು ಫೋಟೋಗ್ರಾಫಿ ಬಗೆಗಿನ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ವೈದ್ಯ ಡಾ. ಎಸ್.ಕೆ. ಅರುಣ್

By

Published : Aug 19, 2019, 7:53 PM IST

ಬಳ್ಳಾರಿ:ವೃತ್ತಿಯಲ್ಲಿ ವೈದ್ಯ, ಪ್ರವೃತ್ತಿಯಲ್ಲಿ ಫೋಟೋಗ್ರಾಫರ್​ ಆಗಿ ಗಮನ ಸೆಳೆದಿದ್ದಾರೆ ಗಣಿನಾಡಿನ ವೈದ್ಯ ಡಾ. ಎಸ್ ಕೆ ಅರುಣ್.. ವೈಲ್ಡ್​ಲೈಫ್​ ಫೋಟೋಗ್ರಾಫಿಯಲ್ಲಿ ಆಸಕ್ತಿ ಹೊಂದಿರೋ ಇವರು ಪ್ರಾಣಿ, ಪಕ್ಷಿಗಳು ಹಾಗೂ ನಿಸರ್ಗದ ವೈಶಿಷ್ಟ್ಯತೆಯನ್ನು ತಮ್ಮ ಕ್ಯಾಮೆರಾ ಕಣ್ಣಿನೊಳಗೆ ಕ್ರಿಯೇಟಿವ್​ ಆಗಿ ಸೆರೆಹಿಡಿದಿದ್ದಾರೆ.

ವೈದ್ಯ ಡಾ. ಎಸ್ ಕೆ ಅರುಣ್ ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ ಚಿತ್ರಗಳು..

ಮೂಲತಃ ಗಣಿನಾಡು ಬಳ್ಳಾರಿಯ ಸತ್ಯನಾರಾಯಣಪೇಟೆಯ ನಿವಾಸಿಯಾದ ಡಾ. ಎಸ್ ಕೆ ಅರುಣ್, ಎಸ್ ಕೆ ಪಾಂಡುರಂಗ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ವೃತ್ತಿಯ ಜೊತೆಗೆ ಹತ್ತು ವರ್ಷಗಳಿಂದ ಹವ್ಯಾಸಿ ಛಾಯಾಗ್ರಾಹಕನಾಗಿಯೂ ಗಮನ ಸೆಳೆದಿದ್ದಾರೆ. ಡಾ. ಎಸ್ ಕೆ ಅರುಣ್ ಈಟಿವಿ ಭಾರತದೊಂದಿಗೆ ಫೋಟೋಗ್ರಾಫಿ ಬಗೆಗಿನ ತಮ್ಮ ಅನುಭವವನ್ನು ಹಂಚಿಕೊಂಡಿದ್ದು ಹೀಗೆ...

ಫೋಟೋಗ್ರಾಫಿ ಅನುಭವ ಹಂಚಿಕೊಂಡ ಡಾ. ಎಸ್ ಕೆ ಅರುಣ್..

ನನ್ನ ಕ್ಯಾಮರಾದಲ್ಲಿ (Nikon 'D'4 500mm) ಸೆರೆಯಾದ ಕೆಲ ಆಯ್ದ ಫೋಟೋಗಳು ಹಂಪಿ ಉತ್ಸವದಲ್ಲಿ ಪ್ರದರ್ಶನಗೊಂಡಿದೆ.‌ ಕೆಲವು ಫೋಟೋಗಳಿಗೆ ಪ್ರಶಸ್ತಿ ಕೂಡ ಬಂದಿದೆ ಅಂತಾರೆ ಡಾ. ಎಸ್‌ ಕೆ ಅರುಣ್‌.

ಡಾ. ಅರುಣ್ ಅದ್ಭುತ ಫೋಟೋಗ್ರಾಫಿ..

ಸತ್ಯನಾರಾಯಣ ಪೇಟೆ ನಿವಾಸಿಗಳಾದ ಡಾ. ಎಸ್.ಕೆ. ಪಾಂಡುರಂಗರಾವ್​, ಮಾಯಾ ದಂಪತಿಯ ಪುತ್ರ ಡಾ. ಎಸ್‌ ಕೆ ಅರುಣ್, ಹತ್ತು ವರ್ಷಗಳಿಂದ ಹವ್ಯಾಸಿ ಫೋಟೋಗ್ರಾಫರ್ ಆಗಿ ಗುರುತಿಸಿಕೊಂಡಿದ್ದಾರೆ. ಈ ಹವ್ಯಾಸಿ ವೃತ್ತಿಯ ಆರಂಭಿಕ ದಿನಗಳಲ್ಲಿ‌ ಹೆಚ್ಚಾಗಿ ಪಕ್ಷಿಗಳ ಫೋಟೋ ಸೆರೆ ಹಿಡಿದಿರುವುದಾಗಿ ಅವರು ನೆನಪಿಸಿಕೊಂಡರು.

ಕುಟುಂಬ ಸದಸ್ಯರೊಂದಿಗೆ ಅರಣ್ಯ ಪ್ರದೇಶದಲ್ಲಿ ಟ್ರಿಪ್:

ಕುಟುಂಬ ಸದಸ್ಯರೊಂದಿಗೆ ಡಾ. ಎಸ್ ಕೆ ಅರುಣ್ ಅರಣ್ಯ ಪ್ರದೇಶದಲ್ಲಿ ಟ್ರಿಪ್..

ಅರುಣ್ ತಿಂಗಳಿಗೊಮ್ಮೆ ಅರಣ್ಯ ಪ್ರದೇಶಕ್ಕೆ ಟ್ರಿಪ್ ಹೋಗುವ ಹವ್ಯಾಸವನ್ನು ಇಟ್ಟುಕೊಂಡಿದ್ದಾರಂತೆ. ನನ್ನೊಂದಿಗೆ ನನ್ನ ಪತ್ನಿಯಾದ ಡಾ.ಎಸ್.ಕೆ. ಚೇತನಾ ಅರುಣ್, ಪುತ್ರ ಅರ್ಚಿತ್ ಹಾಗೂ ಬಾಲ್ಯದ ಗೆಳೆಯರೊಂದಿಗೆ ಟ್ರಿಪ್ ಹೋಗುತ್ತೇನೆ. ವೈದ್ಯ ವೃತ್ತಿ ನನಗೆ ಜೀವನಾಂಶ ನೀಡೋ ವೃತ್ತಿಯಾದ್ರೆ, ಫೋಟೋಗ್ರಾಫಿ ನನ್ನಿಷ್ಟದಪ್ರವೃತ್ತಿಯಾಗಿದೆ. ಹಾಗಾಗಿ ಈ ಹವ್ಯಾಸಿ ವೃತ್ತಿಯನ್ನು ಮುಂದುವರಿಸಿರುವೆ ಎನ್ನುತ್ತಾರೆ ಡಾ. ಅರುಣ್​.

ABOUT THE AUTHOR

...view details