ವಿಜಯನಗರ:ರಾಜಸ್ಥಾನದ ಉದಯಪುರದಲ್ಲಿ ಕನ್ಹಯ್ಯಲಾಲ್ ಹತ್ಯೆ ಖಂಡಿಸಿ ಶ್ರೀರಾಮಸೇನೆಯಿಂದ ಶನಿವಾರ ಕಾರ್ಯಕರ್ತರು ಹೊಸಪೇಟೆ ಬಂದ್ಗೆ ಕರೆ ನೀಡಿದ್ದಾರೆ. ಸ್ವಯಂ ಪ್ರೇರಿತ ಬಂದ್ಗೆ ಕರೆ ನೀಡಿರೋ ಶ್ರೀರಾಮಸೇನೆ, ಕನ್ಹಯ್ಯ ಲಾಲ್ ಕೊಲೆ ಮಾಡಿದ ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗಬೇಕು ಎಂದು ಶ್ರೀರಾಮಸೇನಾ ಕಾರ್ಯಕರ್ತ ಜಗದೀಶ್ ಕಮಟಗಿ ಆಗ್ರಹಿಸಿದ್ದಾರೆ.
ಈ ಕುರಿತು ಮಾತನಾಡಿದ ಜಗದೀಶ್ ಕಮಟಗಿ ವಿಜಯನಗರ ಜಿಲ್ಲೆ ಬಂದ್ಗೆ ವಿವಿಧ ಕನ್ನಡಪರ ಸಂಘಟನೆಗಳನ್ನು ಸಂಪರ್ಕ ಮಾಡುತ್ತಿದ್ದೇವೆ. ಕೆಲವು ಸಂಘಟನೆಗಳು ಬಂದ್ಗೆ ಬೆಂಬಲ ಸೂಚಿಸಿದ್ದಾರೆ. ಇನ್ನು ಪ್ರತಿಭಟನಾ ಮೆರವಣಿಗೆಯನ್ನ ಹೊಸಪೇಟೆ ನಗರದ ಆಂಜನೇಯ ದೇಗುಲದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆಸಲಾಗುತ್ತೆ ಎಂದು ತಿಳಿಸಿದ್ದಾರೆ.
ಪ್ರತಿಭಟನೆ ಬಳಿಕ ಕನ್ಹಯ್ಯ ಲಾಲ್ ಹತ್ಯೆ ಮಾಡಿದ ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗಬೇಕು ಎಂದು ರಾಷ್ಟ್ರಪತಿಗಳಿಗೆ ಮನವಿ ಮಾಡುತ್ತೇವೆ. ಜೊತೆಗೆ ದೇಶದಲ್ಲಿ ಅಮಾಯಕ ಹಿಂದೂಗಳ ಕೊಲೆ ನಿರಂತರವಾಗಿ ನಡೆಯುತ್ತಲೇ ಇದೆ. ಕೊಲೆಗಡುಕರಿಗೆ ನಿರ್ದಾಕ್ಷಿಣ್ಯ ಕ್ರಮ ಅಥವಾ ಗಲ್ಲು ಶಿಕ್ಷೆಗೆ ಒತ್ತಾಯಿಸಬೇಕು. ದೇಶದಲ್ಲಿ ಇದುವರೆಗೆ 36 ಮಂದಿ ಹಿಂದೂಗಳ ಕೊಲೆ ನಡೆದಿದೆ.